ಪುತ್ತೂರು: ವಸತಿ ಶಾಲೆಯಿಂದ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ಪತ್ತೆ
ಪುತ್ತೂರು: ಪುತ್ತೂರಿನ ವಸತಿ ಶಾಲೆಯೊಂದರಿಂದ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೈಸೂರಿನ ತಿಪ್ಪೇಶ(15 ವರ್ಷ) ಮತ್ತು ಅಭಿಷೇಕ್(15 ವರ್ಷ) ನವಂಬರ್ 7ರಂದು ಪುತ್ತೂರಿನ ವಸತಿ ಶಾಲೆಯೊಂದರಿಂದ ನಾಪತ್ತೆಯಾಗಿದ್ದರು.
ಕಾಣೆಯಾದ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,. ಈ ಪ್ರಕರಣದಲ್ಲಿ ಕಾಣೆಯಾದ ಮಕ್ಕಳ ಪತ್ತೆಯ ಬಗ್ಗೆ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನಿರ್ದೆಶನದಲ್ಲಿ, ಪೊಲೀಸ್ ಉಪಾಧೀಕ್ಷಕರು, ಪುತ್ತೂರು ಉಪವಿಭಾಗರವರ ಮಾರ್ಗದರ್ಶನದಲ್ಲಿ ದ.ಕ ಮಹಿಳಾ ಪೊಲೀಸ್ ಠಾಣೆ ಪುತ್ತೂರಿನ ಅಧಿಕಾರಿ ಮತ್ತು ಸಿಬ್ಬಂದಿಗಳಾದ ಶ್ರೀಮತಿ ಸೇಸಮ್ಮ ಪಿಎಸ್‌ಐ, ಹೆಚ್‌ಸಿ 1006 ನೇ ಸುಚಿನ್, ಹೆಚ್‌ಸಿ 1040 ನೇ ರಮೇಶ್, ಮಹೆಚ್‌ಸಿ 922 ನೇ ದಿವ್ಯಶ್ರೀ ಇವರು ಹಾಗೂ ಪುತ್ತೂರು ನಗರ ಠಾಣೆಯ ಸಿಬ್ಬಂದಿಗಳಾದ ಉದಯ ಮತ್ತು ಸ್ಕರಿಯರವರು ಪತ್ತೆ ಕಾರ್ಯ ನಡೆಸಿದ್ದಾರೆ.
ಇನ್ನು ಬಾಲಕರಿಬ್ಬರು ಪುತ್ತೂರು ರೈಲ್ವೇ ನಿಲ್ದಾಣದ ಕಡೆಗೆ ಹೋಗುವುದು ಸಿಸಿಟಿವಿಯಿಂದ ಕಂಡುಬಂದಿದ್ದು, ಅದರಂತೆ ಒಂದು ತಂಡದಲ್ಲಿ ಎಎಸ್‌ಐ ಚಂದ್ರಹಾಸ ಶೆಟ್ಟಿ ಮತ್ತು ಹೆಚ್‌ಸಿ 349 ನೇ ಕುಮಾರಸ್ವಾಮಿರರನ್ನು ನೇಮಿಸಿ ಸಕಲೇಶಪುರ, ಮೈಸೂರು, ಬೆಂಗಳೂರು ಎಂಬಲ್ಲಿಗೆ ತೆರಳಿ ಪತ್ತೆಗೆ ಪ್ರಯತ್ನಿಸಲಾಗಿದ್ದು, ಅಲ್ಲದೆ ಮಕ್ಕಳ ವಿವರಗಳನ್ನು ರೈಲ್ವೇ ಪೊಲೀಸ್, ಸಿಆರ್‌ಪಿಎಫ್, ರೈಲ್ವೇ ಅಧಿಕಾರಿಗಳಿಗೆ ನೀಡಲಾಗಿತ್ತು. ಅದರಂತೆ ಈ ದಿನ ಮಕ್ಕಳು ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ಪೊಲೀಸರಿಗೆ ಸಿಕ್ಕವರನ್ನು ಬೆಂಗಳೂರು ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಹಸ್ತಾಂತರಿಸಲಾಗಿದ್ದು, ಮಕ್ಕಳನ್ನು ವಿಚಾರಿಸಿ ಪೋಷಕರಿಗೆ ಹಸ್ತಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿದು ಬಂದಿದೆ.





