ಬಾಯಲ್ಲಿ ಚಿನ್ನ ಬಚ್ಚಿಟ್ಟು ಸಾಗಿಸಲು ಯತ್ನ – ಕಾಸರಗೋಡಿನ ಯುವಕ ಅರೆಸ್ಟ್
ಕೇರಳ: 29 ಪವನ್ ಚಿನ್ನಾಭರಣಗಳನ್ನು ಬಾಯಲ್ಲಿ ಬಚ್ಚಿಟ್ಟುಕೊಂಡ ಪ್ರಯಾಣಿಕನೊಬ್ಬ ಕೇರಳದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಾಸರಗೋಡು ಪೆರುಂಬಳ ವಲಿಯಮೂಲ ನಿವಾಸಿ ಅಬ್ದುಲ್ ಅಫ್ಜಲ್ (24) ಎಂದು ಗುರುತಿಸಲಾಗಿದೆ.
ಈತ 8 ಚಿನ್ನದ ನಾಣ್ಯಗಳನ್ನು ಬಾಯಲ್ಲಿಟ್ಟುಕೊಂಡು ಏರ್‌ಪೋರ್ಟಿಗೆ ಬಂದಿದ್ದ.
ಶಾರ್ಜಾದಿಂದ ಕೋಝಿಕ್ಕೋಡ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಫ್ಜಲ್ ವಿಮಾನ ನಿಲ್ದಾಣದೊಳಗೆ ತಪಾಸಣೆ ನಡೆಸಿ ಹೊರಗೆ ಬಂದಾಗ ಕರಿಪುರ ಪೊಲೀಸರು ಬಂಧಿಸಿದ್ದಾರೆ.





