September 28, 2026

ಮಾಣಿ ಫ್ಲೈ ಓವರ್ ನಲ್ಲಿ ಭೀಕರ ಅಪಘಾತ : ಮಡಿಕೇರಿ ಮೂಲದ ಮೂವರು ಗಂಭೀರ,ಒಬ್ಬರು ಮಹಿಳೆ ಮೃತ್ಯು: ಉಮ್ರಾ ತರಗತಿ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಕುಟುಂಬ

0
image_editor_output_image-2125179313-1790559676455

ವಿಟ್ಲ : ಇಲ್ಲಿನ ಹಳೀರ ಬಳಿ ಫ್ಲೈ ಓವರ್ ಶುರುಆಗುವ ರಸ್ತೆಯ ಮೇಲೆ ಆಲ್ಟೋ ಕಾರು ಮತ್ತು ಟೆಂಪೋ ಪಿಕಪ್ ವಾಹನಗಳ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರು ಗಂಭೀರ ಗಾಯಗೊಂಡು, ಓರ್ವ ಮಹಿಳೆ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ 6 ಗಂಟೆಯ ವೇಳೆಗೆ ನಡೆದಿದೆ.

ಮಡಿಕೇರಿ ನಿವಾಸಿ ನಫೀಸಾ (55)ಮೃತಪಟ್ಟ ಮಹಿಳೆ.

 

ಚಾಲಕ ಸೇರಿ 5 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ನಾಲ್ಕು ಹೆಂಗಸರು ಹಾಗೂ ಚಾಲಕ ಕಾರಿನಲ್ಲಿದ್ದ. ಉಮ್ರಾ ತರಗತಿ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಕುಟುಂಬ ಎಂದು ಹೇಳಲಾಗಿದೆ.

ಪುತ್ತೂರು, ಮಡಿಕೇರಿ ಮೈಸೂರು ರಸ್ತೆಗೆ ಪ್ರವೇಶ ಮಾಡಬೇಕಾದ ಹಳೀರದ ಸರ್ವಿಸ್ ರಸ್ತೆಯು ಗೊಂದಲಗಳಿಂದ ಕೂಡಿದ್ದು ಅಪಘಾತಗಳು ಹೆಚ್ಚೆಚ್ಚು ನಡೆಯಲು ಕಾರಣ ಎಂದು ಸ್ಥಳೀಯರು ದೂರುತ್ತಿದ್ದರು,ಹೊರಗಿನಿಂದ ಬಂದವರಿಗೆ ಈ ಸರ್ವಿಸ್ ರಸ್ತೆಯು ಮಡಿಕೇರಿ ಮೈಸೂರು ಮಹಾನಗರಕ್ಕೆ ಪ್ರವೇಶ ರಸ್ತೆ ಎಂದು ಸರಿಯಾಗಿ ತಿಳಿಯದೆ ವಾಹನ ಚಾಲನೆಯಲ್ಲಿ ಗೊಂದಲ ಉಂಟಾಗುತ್ತಿರುವುದು ದಿನೇ ಸಾಮಾನ್ಯವಾಗಿದೆ,ಕಿರಿದಾದ ಪ್ರವೇಶ ರಸ್ತೆಯು ಸರಿಯಾಗಿ ಗೋಚರಿಸದೇ ಇರುವುದು ಮತ್ತು ಯಾವುದೇ ಸೂಚನಾ ಫಲಕ ಕೂಡಾ ಇಲ್ಲದೇ ಇರುವುದು ಹಲವಾರು ಗೊಂದಲಗಳಿಗೆ ಕಾರಣವಾಗುತ್ತಿದೆ,ಗಂಭೀರ ಗಾಯಗೊಂಡವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ,ಹೆಚ್ಚಿನ ಮಾಹಿತಿ ತಿಳಿದುಬರಬೇಕಷ್ಟೇ.

Leave a Reply

Your email address will not be published. Required fields are marked *

error: Content is protected !!