November 13, 2026

ಬಂಟ್ವಾಳದಲ್ಲಿ ನ.14ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ: ಮಧುಮೇಹ ಜಾಗೃತಿ, ಶಿಕ್ಷಣ ಮತ್ತು ತಡೆಗಟ್ಟುವಿಕೆ ಕಾರ್ಯಕ್ರಮ ಆಯೋಜನೆ

0
image_editor_output_image-817319141-1794548292036

ಬಂಟ್ವಾಳ: ವಿಶ್ವ ಮಧುಮೇಹ ದಿನಾಚರಣೆ-2026ರ ಅಂಗವಾಗಿ ಫಾದರ್ ಮುಲ್ಲರ್ ಆಸ್ಪತ್ರೆ, ತುಂಬೆ ಹಾಗೂ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು, ತುಂಬೆ ವತಿಯಿಂದ ಲಯನ್ಸ್ ಕ್ಲಬ್ ಬಂಟ್ವಾಳದ ಸಹಯೋಗದೊಂದಿಗೆ ನ.14ರಂದು ಉಚಿತ ಆರೋಗ್ಯ ತಪಾಸಣೆ ಮತ್ತು ಮಧುಮೇಹ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ಬಿ.ಸಿ. ರಸ್ತೆಯ ಲಯನ್ಸ್ ಸೇವಾ ಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ.

ಶಿಬಿರದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ (GRBS), ರಕ್ತದೊತ್ತಡ (BP), ಇಸಿಜಿ (ECG), ದೇಹದ ದ್ರವ್ಯರಾಶಿ ಸೂಚ್ಯಂಕ (BMI), ದಂತ ತಪಾಸಣೆ, ಚರ್ಮರೋಗ ತಪಾಸಣೆ ಮತ್ತು ಆರೈಕೆ, ದೃಷ್ಟಿ ತಪಾಸಣೆ ಹಾಗೂ ಆಹಾರ ಪದ್ಧತಿ ಕುರಿತು ಸಲಹೆ ನೀಡಲಾಗುವುದು. ಅಗತ್ಯವಿರುವವರಿಗೆ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು (Referral) ಮಾಡಲಾಗುತ್ತದೆ.

ಇದಲ್ಲದೆ, ಟಿಎಂಟಿ (TMT) ಪರೀಕ್ಷೆಗೆ ವಿಶೇಷ ರಿಯಾಯಿತಿ ದರವನ್ನು ಕಲ್ಪಿಸಲಾಗಿದೆ. ಮಧುಮೇಹದ ಕುರಿತು ಜಾಗೃತಿ ಮೂಡಿಸುವುದು, ಆರಂಭಿಕ ಹಂತದಲ್ಲಿಯೇ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚುವುದು ಹಾಗೂ ಸೂಕ್ತ ಚಿಕಿತ್ಸೆ ಪಡೆಯಲು ಸಾರ್ವಜನಿಕರನ್ನು ಪ್ರೋತ್ಸಾಹಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ಹೆಚ್ಚಿನ ಮಾಹಿತಿಗಾಗಿ 9980100070 ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!