February 1, 2026

ಪುತ್ತೂರು: ತಾವು ಮಾಡದ ಕೆಲಸವನ್ನು ತಮ್ಮದೆಂದು ಬಿಂಬಿಸಿ ಶಾಸಕ ಸಂಜೀವ ಮಠಂದೂರು ಬಿಲ್ಡಪ್ ಕೊಡುತ್ತಿದ್ದಾರೆ -ಬ್ಲಾಕ್ ಕಾಂಗ್ರೆಸ್

0
IMG-20221107-WA0045.jpg

ಪುತ್ತೂರು: ಪುತ್ತೂರು ಶಾಸಕರಾದ ಸಂಜೀವ ಮಠಂದೂರು ತಾವು ಮಾಡದ ಕೆಲಸವನ್ನು ತಮ್ಮದೆಂದು ಬಿಂಬಿಸಿ ಬಿಲ್ಡಪ್ ಕೊಡುತ್ತಿದ್ದಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ.

ಈ ಕುರಿತು ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿಯವರು ಮಾತನಾಡಿ ಶಾಸಕ ಸಂಜೀವ ಮಠಂದೂರು ಶಾಸಕರಾಗಿ ನಾಲ್ಕೂವರೆ ವರ್ಷಗಳು ಕಳೆದಿದ್ದು, ಪುತ್ತೂರಿನ ಜನತೆಗಾಗಿ ಏನನ್ನೂ ಮಾಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದ ಸಮಯದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ತಮ್ಮದೆಂಬಂತೆ ಬಿಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ‌ ಎಂದರು.

ಪುತ್ತೂರು- ಉಪ್ಪಿನಂಗಡಿಯ ಅಭಿವೃದ್ಧಿ ಕಾಮಗಾರಿಗೆ ಹಣ ಬಿಡುಗಡೆ ಮಾಡಿರುವುದು ಹಿಂದಿನ ಶಾಸಕರಾದ ಶಕುಂತಲಾ ಶೆಟ್ಟಿಯಾಗಿದ್ದು, ಇದೀಗ ಶಾಸಕರು ಈ ಕಾಮಗಾರಿ ತನ್ನ ಪ್ರಯತ್ನದಿಂದ ಆಗಿರುವುದು ಎಂದು ಫೋಸ್ ಕೊಡುತ್ತಿದ್ದಾರೆ ಎಂದಿದ್ದಾರೆ.

ಇನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಮಾಡುವ ಸೇತುವೆ ನಿರ್ಮಾಣದಂತಹ ರೂಟೀನ್ ಕೆಲಸಗಳನ್ನೂ ತಮ್ಮಿಂದಲೇ ಆಗುತ್ತಿದೆ ಎನ್ನುವುದನ್ನು ಶಾಸಕರು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಂದು ಹೇಳುತ್ತಾ ತಿರುಗಾಟುತ್ತಿದ್ದು, ಪುತ್ತೂರು ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಸರಕಾರ ಆರಂಭಿಸಿದ ಕೆಲಸವನ್ನು ಉದ್ಘಾಟಿಸುವ ಕೆಲಸವನ್ನಷ್ಟೇ ಶಾಸಕರು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!