September 28, 2026

ಕಡಬ:  ಹಿಟ್ ಅಂಡ್ ರನ್ ಪ್ರಕರಣ: ಚಾಲಕನ ವಿರುದ್ಧ ಪ್ರಕರಣ ದಾಖಲು

0
image_editor_output_image-2123332271-1790581637328

ಕಡಬ: ಅಲಂಕಾರು ಗ್ರಾಮದ ಆಚಾರಿ ಕೊಟ್ಟಾಯ ಬಳಿ ನಡೆದ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಡಬ ಪೊಲೀಸರು ಕಪ್ಪು ಬಣ್ಣದ ಎಸ್‌ಯುವಿ ಥಾರ್ ಜೀಪ್ ವಾಹನವನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸೆಪ್ಟೆಂಬರ್ 25ರ ರಾತ್ರಿ ನಡೆದ ಈ ಅಪಘಾತದಲ್ಲಿ, ಅಲಂಕಾರು ಗ್ರಾಮದ ನಡ್ತಿಲ ನಿವಾಸಿ ಲೋಕೇಶ್ (42) ಎಂಬ ಬೈಕ್ ಸವಾರ ಮೃತಪಟ್ಟಿದ್ದರು.

ಆಲಂಕಾರು ಪಟ್ಟಣದಲ್ಲಿ ಹಿಂದಿನಿಂದ ಬಂದ ಥಾರ್‌ ಬೈಕ್‌ಗೆ ಡಿಕ್ಕಿ ಹೊಡೆದು ಚಾಲಕ ಸ್ಥಳದಿಂದ ಪರಾರಿಯಾಗಿದ್ದ ಎನ್ನಲಾಗಿದೆ. ವಾಹನ ಉಪ್ಪಿನಂಗಡಿ ಕಡೆಗೆ ಪರಾರಿಯಾಗಿದೆ ಎಂಬ ಮಾಹಿತಿಯ ಮೇರೆಗೆ, ಆಲಂಕಾರು ಪ್ರದೇಶದ ಸ್ಥಳೀಯ ಯುವಕರು ಆತೂರು, ರಾಮಕುಂಜ, ಕೊಯಿಲಾ, ಉಪ್ಪಿನಂಗಡಿ, ನೆಲ್ಯಾಡಿ ಮತ್ತು ಇತರ ಪ್ರದೇಶಗಳ ಜನರಿಗೆ ಮಾಹಿತಿ ನೀಡಿ ವಾಹನಕ್ಕಾಗಿ ನಿಗಾ ಇಟ್ಟಿದ್ದರು.

 

Leave a Reply

Your email address will not be published. Required fields are marked *

error: Content is protected !!