September 28, 2026

ಮಾಣಿ: ಕಾರು- ಪಿಕಪ್ ವಾಹನ ನಡುವೆ ಅಪಘಾತ: ಮಹಿಳೆ ಮೃತ್ಯು, ಮೂವರು ಮಹಿಳೆಯರು ಗಂಭೀರ

0
image_editor_output_image-1005709770-1790581164276

ಬಂಟ್ವಾಳ: ಆಲ್ಟೋ ಕಾರು ಮತ್ತು ಟೆಂಪೋ ಪಿಕಪ್ ವಾಹನಗಳ ಮಧ್ಯೆ ನಡೆದ ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟು, ಮೂವರು ಮಹಿಳೆಯರು ಗಂಭೀರ ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ 6 ಗಂಟೆಯ ವೇಳೆಗೆ ಬಂಟ್ವಾಳದ ಮಾಣಿ ಫ್ಲೈ ಓವರ್ ನಲ್ಲಿ ನಡೆದಿದೆ.

ಮಡಿಕೇರಿ ನಿವಾಸಿ ನಬೀಶ್ ( 55) ಮೃತಪಟ್ಟ ಮಹಿಳೆ. ನಾಲ್ಕು ಮಂದಿ ಮಹಿಳೆಯರು ಹಾಗೂ ಚಾಲಕ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇವರು ಉಮ್ರಾ ತರಗತಿ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಗಂಭೀರ ಗಾಯಗೊಂಡವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಇನ್ನು ಪುತ್ತೂರು, ಮಡಿಕೇರಿ ಮೈಸೂರು ರಸ್ತೆಗೆ ಪ್ರವೇಶ ಮಾಡಬೇಕಾದ ಹಳೀರದ ಸರ್ವಿಸ್ ರಸ್ತೆಯು ಗೊಂದಲಗಳಿಂದ ಕೂಡಿದ್ದು ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಹಿಂದಿನಿಂದಲೂ ದೂರುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!