ಮಂಗಳೂರು: ಪೊಲೀಸರು ಜನರ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡಬೇಡಿ – ರಿಯಾಝ್ ಕಡಂಬು
ಮಂಗಳೂರು: ಎನ್‌ಐಎ ಬೆಳ್ಳಾರೆಯ ಶಾಫಿ ಬೆಳ್ಳಾರೆ ಮತ್ತು ಇಕ್ಬಾಲ್ ಬೆಳ್ಳಾರೆಯನ್ನು ಯಾಕೆ ಬಂಧಿಸಿದ್ದಾರೆ ಎಂಬುವುದು ತಿಳಿದಿಲ್ಲ. ಇವರು ಎಲ್ಲಿಯೂ ಅಡಗಿಕೂತವರಲ್ಲ. ಇವರು ಸಭೆ ಕಾರ್ಯಕ್ರಮ, ಜನಸೇವೆಗಾಗಿ ಲಭ್ಯವಿದ್ದವರು ಎಂದು ಎಸ್.ಡಿ.ಪಿ. ಐ ರಾಜ್ಯ ಮುಖಂಡ ರಿಯಾಝ್ ಕಡಂಬು ಹೇಳಿದರು.
ಇಂದು ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಪೊಲೀಸರ ದಬ್ಬಾಳಿಕೆಯಾಗುತ್ತಿದೆ. ಶಾಸಕರ ಭವನ, ಗ್ರಾ.ಪಂಗಳಿಗೂ ಮುತ್ತಿಗೆ ಹಾಕುತ್ತೇವೆ ಏಕೆಂದರೆ ನಾವು ಜನ ಪರ ಸೇವೆ ಮಾಡುವವರು ಅವರಿಗೆ ಎಲ್ಲಾ ಸೇವೆ ಒದಗಿಸುವ ಕಾರ್ಯ ಮಾಡುತ್ತೆವೆ. ಇದುವರೆಗೂ 15ಕ್ಕೂ ಮಿಕ್ಕ ಸೇವಾ ಕೇಂದ್ರಗಳನ್ನು ಪೊಲೀಸರು ಮುಚ್ಚಿಸಿದ್ದಾರೆ. ಪ್ರತಿ ನಗರಗಳಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದರು.
ನಾಯಕರನ್ನು ಬಂಧಿಸುವುದನ್ನು ಪೊಲೀಸರು ನಿಲ್ಲಿಸಬೇಕು. ಟೋಲ್ ಗೇಟ್ ಹೋರಾಟಗಾರ ಮನೆಗೂ ನುಗ್ಗುತ್ತಾರೆ. ಪೊಲೀಸ್ ಅಧಿಕಾರಿಗಳು ಜನರ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡಬೇಡಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ, ಜಿಲ್ಲಾ ಮುಖಂಡರು ಉಪಸ್ಥಿತರಿದ್ದರು.





