ಹರಿಯಾಣ: ರೈತರ ಪ್ರತಿಭಟನೆ ವೇಳೆ ಬಿಜೆಪಿ ಸಂಸದರ ಕಾರಿಗೆ ಹಾನಿ:
ಇಬ್ಬರ ಬಂಧನ
ಹರಿಯಾಣ: ಶುಕ್ರವಾರ ಹರಿಯಾಣದ ಹಿಸಾರ್ ಜಿಲ್ಲೆಗೆ ಬಿಜೆಪಿ ಸಂಸದ ರಾಮ್ ಚಂದರ್ ಜಂಗ್ರಾ ಅವರ ಭೇಟಿಯ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ, ದುಷ್ಕರ್ಮಿಗಳ ಗುಂಪೊಂದು ಅವರ ಕಾರಿನ ಮೇಲೆ ಲಾಠಿ ಎಸೆದಿದೆ ಎಂದು ಆರೋಪಿಸಲಾಗಿದೆ. ಇದರಿಂದ ವಾಹನದ ಗಾಜು ಜಖಂಗೊಂಡಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಪಿಟಿಐ ವರದಿಯ ಪ್ರಕಾರ ಘಟನೆಯ ನಂತರ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ರಾಮ್ ಚಂದರ್ ಜಂಗ್ರಾಗೆ ತಿಳಿಸಿದ್ದಾರೆ.
ಹರಿಯಾಣದಲ್ಲಿ, ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಆಡಳಿತಾರೂಢ ಬಿಜೆಪಿ ಮತ್ತು ಜನನಾಯಕ್ ಜನತಾ ಪಾರ್ಟಿಯ ನಾಯಕರ ಭೇಟಿ ಮತ್ತು ಕಾರ್ಯಕ್ರಮಗಳನ್ನು ವಿರೋಧಿಸುತ್ತಿದ್ದಾರೆ.
ಪೊಲೀಸರ ಪ್ರಕಾರ, ಕಪ್ಪು ಬಾವುಟಗಳನ್ನು ಹಿಡಿದ ಪ್ರತಿಭಟನಾಕಾರರು ಶುಕ್ರವಾರ ಹಿಸಾರ್‌ನ ನಾರ್ನಾಂಡ್‌ನಲ್ಲಿ ರಾಮ್ ಚಂದರ್ ಜಾಂಗ್ರಾ ಅವರ ರಸ್ತೆ ತಡೆ ನಡೆಸಿದರು. ನಂತರ ರಾಜ್ಯಸಭಾ ಸಂಸದ ರಾಮ್ ಚಂದರ್ ಜಾಂಗ್ರಾ ಅವರಿಗೆ ಹೋಗಲು ರಸ್ತೆಯನ್ನು ತೆರವುಗೊಳಿಸಲಾಯಿತು.





