ಉಜಿರೆ: ಜೀಪು ಮತ್ತು ಆಟೋ ಚಾಲಕರ ನಡುವೆ ರಾಡ್ ನಿಂದ ಹಲ್ಲೆ:
ಪ್ರಕರಣ ದಾಖಲು
ಬೆಳ್ತಂಗಡಿ: ಬಾಡಿಗೆ ವಿಚಾರದಲ್ಲಿ ಜೀಪು ಮತ್ತು ಆಟೋ ರಿಕ್ಷಾ ಚಾಲಕನ ನಡುವೆ ವಾಗ್ವಾದ ನಡೆದು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿಯ ಉಜಿರೆಯ ಸೋಮಂತಡ್ಕ ಎಂಬಲ್ಲಿ ನಡೆದಿದೆ.
ಉಜಿರೆ ಗ್ರಾಮದ ರೆಂಜಾಳ ನಿವಾಸಿ ಅಮೃತ್ ಆಲ್ಬರ್ಟ ಮೋನಿಸ್(52) ಹಲ್ಲೆಗೊಳಗಾದ ಆಟೋ ಚಾಲಕ. ಬೆಳ್ತಂಗಡಿ ಠಾಣೆಯಲ್ಲಿ ನಿಜಾಮುದ್ದೀನ್ ಮತ್ತು ಶೀನಪ್ಪ ಅವರು ವಿರುದ್ಧ ಪ್ರಕರಣ ದಾಖಲಾಗಿದೆ.
ಆಟೋ ಚಾಲಕರಾಗಿರುವ ಅಮೃತ್ ಆಲ್ಬರ್ಟ ಮೋನಿಸ್ ಅವರು
ಉಜಿರೆ ಪೇಟೆಯಲ್ಲಿರುವ ಸೋಮಂತಡ್ಕ ಆಟೋ ಪಾರ್ಕ್ ನಲ್ಲಿ ತನ್ನ ಆಟೋ ರಿಕ್ಷಾವನ್ನು ನಿಲ್ಲಿಸಿ ಬಾಡಿಗೆ ಮಾಡುತ್ತಿದ್ದಾಗ ಆಟೋದಲ್ಲಿ ಪ್ರಯಾಣಿಕರು ಕುಳಿತಿದ್ದರು. ಈ ಸಂದರ್ಭ ಆರೋಪಿ ನಿಜಾಮುದ್ದೀನ್ ಎಂಬಾತನು ಆಟೋದಿಂದ ಪ್ರಯಾಣಿಕರನ್ನು ಕರದುಕೊಂಡು ಹೋಗಿ ತನ್ನ ಜೀಪಿನಲ್ಲಿ ಕುಳ್ಳಿರಿಸಿದ್ದು, ಆ ಸಮಯ ಅಮೃತ್ ಆಲ್ಬರ್ಟ ಮೋನಿಸ್ ಅವರು ಆಕ್ಷೇಪಿಸಿದಾಗ ಆರೋಪಿತನಾದ ನಿಜಾಮುದ್ದೀನನು ಶೀನಪ್ಪ ಎಂಬುವನನ್ನು ಕರೆದುಕೊಂಡು ಬಂದು ಅಮೃತ್ ಆಲ್ಬರ್ಟ ಮೋನಿಸ್ ಅವರಿಗೆ ಶೀನಪ್ಪನು ಕೈಯಿಂದ ಎದೆ ಮತ್ತು ಭುಜಕ್ಕೆ ಹೊಡೆದು ನಿಜಾಮುದ್ದಿನನು ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.





