ಏಷ್ಯನ್ ಗೇಮ್ಸ್ 2026:
ಚಿನ್ನ ಗೆದ್ದ ಭಾರತದ ಅರ್ಚರಿ ತಂಡ
ಜಪಾನ್: ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಮಹಿಳಾ ಆರ್ಚರಿ ತಂಡ ಭರ್ಜರಿ ಸಾಧನೆ ಮಾಡಿದೆ. ಚೀನಾವನ್ನು 238-234 ಅಂಕಗಳಿಂದ ಮಣಿಸಿದ ಜ್ಯೋತಿ ಸುರೇಖಾ ವೆನ್ನಮ್, ಚಿಕಿತಾ ತನಿಪರ್ತಿ, ಪ್ರೀತಿಕಾ ಪ್ರದೀಪ್ ಒಳಗೊಂಡ ಭಾರತ ತಂಡ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.
ಈ ಗೆಲುವಿನೊಂದಿಗೆ ಭಾರತ ತಂಡ ವಿಶ್ವದಾಖಲೆ ಮಾಡಿದ್ದು, ಸತತ ಎರಡನೇ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಆರ್ಚರಿ ತಂಡ ಚಿನ್ನವನ್ನು ಉಳಿಸಿಕೊಂಡಿದೆ. ಜ್ಯೋತಿ ಸುರೇಖಾ ವೆನ್ನಮ್, ಚಿಕಿತಾ ತನಿಪರ್ತಿ, ಪ್ರೀತಿಕಾ ಪ್ರದೀಪ್ ಒಳಗೊಂಡ ಭಾರತ ತಂಡವು ಫೈನಲ್‌ನಲ್ಲಿ ಪ್ರಾಬಲ್ಯ ಮೆರೆಯಿತು. ಚಿನ್ನದ ಪದಕದ ಪಂದ್ಯದಲ್ಲಿ ಚೀನಾವನ್ನು 238-234 ಅಂಕಗಳಿಂದ ಸೋಲಿಸಿ ಅಗ್ರಸ್ಥಾನಕ್ಕೇರಿತು. ವುನಿಯರ್, ಯು ವಾಂಗ್ ಮತ್ತು ಫಾಂಗ್ಯಾವೋ ವೀ ಒಳಗೊಂಡ ಚೀನಾ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು.




