September 30, 2026

ಉಳ್ಳಾಲ: 1.60 ಲಕ್ಷ ರೂ. ಮೌಲ್ಯದ ಡ್ರಗ್ಸ್ ಸಹಿತ ಆರೋಪಿಯ ಬಂಧನ

0
image_editor_output_image1020277826-1790748398543

ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎ ಹೊಂದಿದ್ದ ಆರೋಪಿಯೋರ್ವನನ್ನು ಕಾವೂರು ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದು, ಆತನ ಬಳಿಯಿದ್ದ 1,60,000 ಲಕ್ಷ ರೂ. ಮೌಲ್ಯದ 16 ಗ್ರಾಂ ಎಂಡಿಎಂಎ ಅನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳೂರು ಉಳ್ಳಾಲದ ಕೆ.ಸಿ. ರೋಡ್ ನ ಕೊಟೇಕಾರ್ ಅಂಚೆ ಅಜ್ಜಿನಡ್ಕ ಗ್ರಾಮದ ನಿವಾಸಿ ಮೊಹಮ್ಮದ್ ಇರ್ಫಾನ್ ಎ.ಕೆ, (26) ಬಂಧಿತ ಆರೋಪಿ.

 

ಸೆ. 29ರಂದು ಕಾವೂರು ಪೊಲೀಸ್ ಠಾಣೆಯ ಪೊಲೀಸರು ಮರಕಡ ಗ್ರಾಮದ ಬೊಂದೇಲ್‌ನಿಂದ ಮೂಡುಶೆಡ್ಡೆ ಕಡೆಗೆ ಹೋಗುವ ಡಾಮಾರು ರಸ್ತೆಯ ಬಳಿ ಆರೋಪಿಯು ಅನುಮಾನಾಸ್ಪದವಾಗಿ ನಿಂತಿದ್ದ. ಈ ವೇಳೆ ತನಿಖೆ ನಡೆಸಿದ ಕಾವೂರು ಠಾಣಾ ಪೊಲೀಸರು ಆತನ ಬಳಿಯಿದ್ದ ಸುಮಾರು 16 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತುವನ್ನು ಕಾನೂನು ಬದ್ಧವಾಗಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಎಂಡಿಎಂಎ ಮಾದಕ ವಸ್ತುವಿನ ಅಂದಾಜು ಮೌಲ್ಯವು ಸುಮಾರು 1,60,000 ರೂ. ಆಗಿರುತ್ತದೆ.

ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ.128/2026 ಎನ್.ಡಿ.ಪಿ.ಎಸ್. ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಪ್ರಕರಣದ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಆರೋಪಿಯ ವಿರುದ್ಧ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ, ಪುಂಜಾಲ ಕಟ್ಟೆ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ಹಾಗೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗಾಂಜಾ ಸೇವನೆ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!