ಹೋಟೆಲ್ನ 7ನೇ ಮಹಡಿಯ ಕಿಟಕಿಯಿಂದ ಬಿದ್ದು ಯುವತಿ ಸಾವು
ಬ್ರೆಜಿಲ್: ಹೋಟೆಲ್ನ ಏಳನೇ ಮಹಡಿಯ ಕಿಟಕಿಗೆ ಒರಗಿಕೊಂಡಿದ್ದ ವೇಳೆ ಅಲ್ಯೂಮಿನಿಯಂ ಪ್ರೇಮ್ ಕಳಚಿದ ಪರಿಣಾಮ ಮಹಿಳೆಯೊಬ್ಬರು ಆಯತಪ್ಪಿ ಏಳನೇ ಮಹಡಿಯಿಂದ ಕೆಳಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಈಶಾನ್ಯ ಬ್ರೆಜಿಲ್ನಲ್ಲಿ ನಡೆದಿದೆ. ಈ ಘಟನೆಯ ಭಯಾನಕ ದೃಶ್ಯ ಹೋಟೆಲ್ ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೃತರನ್ನು ರೇನಾಟಾ ರೆಬೆಕಾ (26) ಎಂದು ಗುರುತಿಸಲಾಗಿದೆ.
ಇಬ್ಬರು ಮಕ್ಕಳ ತಾಯಿಯಾಗಿರುವ ರೆಬೆಕಾ, ಹೋಟೆಲ್ ಕಾರಿಡಾರ್ನಲ್ಲಿ ತೆರಳುತ್ತಿದ್ದ ವೇಳೆ ಕಿಟಕಿಯ ಅಲ್ಯೂಮಿನಿಯಂ ಪ್ರೇಮ್ಗೆ ಒರಗಿ ನಿಂತಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆ ಕಿಟಕಿಯ ಚೌಕಟ್ಟು ಕಳಚಿ ಬಿದ್ದಿದ್ದರಿಂದ ಆಕೆ 7ನೇ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾರೆ.
ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ: ಘಟನೆಯ ದೃಶ್ಯಗಳು ಹೋಟೆಲ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ರೆಬೆಕಾ ಹಾಗೂ ಅವರ ಗೆಳೆಯ ಹೋಟೆಲ್ ಕಾರಿಡಾರ್ನಲ್ಲಿ ರೂಮ್ ನ ಕೀ ಹುಡುಕುತ್ತಾ ನಡೆದಾಡುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ. ನಂತರ ರೆಬೆಕಾ ಕಿಟಕಿಯ ಅಂಚಿನಲ್ಲಿ ಕುಳಿತು ಪ್ರೇಮ್ಗೆ ಒರಗಿ ಕೂರಲು ಯತ್ನಿಸಿದ್ದಾರೆ ಈ ವೇಳೆ ಕಿಟಕಿಯ ಫೋಮ್ ಏಕಾಏಕಿ ಕಳಚಿಕೊಂಡಿದೆ. ಪರಿಣಾಮ ಅವರು ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆ ಅವರ ಗೆಳೆಯ ಕೆಲ ಸೆಕೆಂಡುಗಳ ಕಾಲ ಅಲ್ಲಿಯೇ ನಿಂತಿರುವುದೂ ಸಿಸಿಟಿವಿಯಲ್ಲಿ ದಾಖಲಾಗಿದೆ.




