November 7, 2026

ಸಾಲ ತೀರಿಸಲಾಗದೆ ಕಳೆನಾಶಕ ಸೇವಿಸಿ ರೈತ ಆತ್ಮಹತ್ಯೆ

0
image_editor_output_image-236618466-1793993789282

ರಿಪ್ಪನ್‌ಪೇಟೆ: ಮಳೆ ಕೊರತೆಯಿಂದ ಬೆಳೆ ನಷ್ಟ ಸಂಭವಿಸಿ, ಸಾಲ ತೀರಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರೈತರೊಬ್ಬರು ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ನ.5ರ ಗುರುವಾರ ನಡೆದಿದೆ.

ಮೃತರನ್ನು ಬಸವಾಪುರ ಗ್ರಾಮದ ಸುರೇಶ್ ಟಿ. (59) ಎಂದು ಗುರುತಿಸಲಾಗಿದೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಸುರೇಶ್ ಅವರು ಬಸವಾಪುರ ಗ್ರಾಮದ ಸರ್ವೆ ನಂಬರ್ 33ರಲ್ಲಿ ಸುಮಾರು 3.3 ಎಕರೆ ಕೃಷಿ ಜಮೀನು ಹೊಂದಿದ್ದು, ಅಡಿಕೆ, ಭತ್ತ ಹಾಗೂ ಕಬ್ಬು ಬೆಳೆದಿದ್ದರು. ಆದರೆ ಈ ಬಾರಿ ನಿರೀಕ್ಷಿತ ಮಳೆಯಾಗದೆ ಬೆಳೆಗಳು ಒಣಗಿ ಅಪಾರ ನಷ್ಟ ಸಂಭವಿಸಿತ್ತು.

ಕೃಷಿ ಚಟುವಟಿಕೆಗಳಿಗಾಗಿ ಅರಸಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 75 ಸಾವಿರ ರೂ. ಸಾಲ ಪಡೆದಿದ್ದ ಅವರು, ಇದರ ಜೊತೆಗೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸ್ಥಳೀಯರಿಂದ ಸುಮಾರು 5-6 ಲಕ್ಷದವರೆಗೆ ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಬೆಳೆ ನಷ್ಟದಿಂದ ಆದಾಯವಿಲ್ಲದೆ ಸಾಲ ಮರುಪಾವತಿ ಸಾಧ್ಯವಾಗದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು.

Leave a Reply

Your email address will not be published. Required fields are marked *

error: Content is protected !!