November 6, 2026

ಮುಳ್ಳಿಕಟ್ಟೆ: ಟೈರ್ ದಿಢೀರ್ ಸ್ಪೋಟಗೊಂಡು ಮೀನು ಸಾಗಿಸುತ್ತಿದ್ದ ವಾಹನ ಪಲ್ಟಿ

0
image_editor_output_image2006401408-1793963457498

ತ್ರಾಸಿ: ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ – ಮುಳ್ಳಿಕಟ್ಟೆ ಫ್ಲೈಓವರ್ ಮೇಲೆ ಮೀನು ಸಾಗಿಸುತ್ತಿದ್ದ ವಾಹನವೊಂದರ ಟೈರ್ ದಿಢೀರ್ ಸ್ಪೋಟಗೊಂಡು ರಸ್ತೆಗೆ ಮುಗುಚಿ ಬಿದ್ದ ಘಟನೆ ಶುಕ್ರವಾರ ಸಂಭವಿಸಿದೆ.

ಮಹಾರಾಷ್ಟ್ರ ನೋಂದಣಿಯ ಈ ವಾಹನವು ಮುಂಬೈಯಿಂದ ಕುಂದಾಪುರದತ್ತ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಚಾಲನೆಯ ವೇಳೆಯಲ್ಲಿ ದಿಢೀರನೆ ಟೈರ್ ಸ್ಪೋಟಗೊಂಡಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆಯಲ್ಲೇ ಪಲ್ಟಿಯಾಗಿದೆ. ಘಟನೆಯ ಸಮಯದಲ್ಲಿ ವಾಹನದಲ್ಲಿ ಚಾಲಕ ಒಬ್ಬರೇ ಇದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ ಪವಾಡಸಾದೃಶ್ಯವಾಗಿ ಪಾರಾಗಿದ್ದಾರೆ.

ಅಪಘಾತದ ವಿಷಯ ತಿಳಿಯುತ್ತಿದ್ದಂತೆಯೇ ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಹೈವೇ ಪೆಟ್ರೋಲ್ (ಹೆದ್ದಾರಿ ಗಸ್ತು) ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಕ್ರೇನ್ ಮೂಲಕ ಪಲ್ಟಿಯಾಗಿದ್ದ ವಾಹನವನ್ನು ಮೇಲೆತ್ತಿ ತೆರವುಗೊಳಿಸಲಾಯಿತು. ಪೊಲೀಸರ ತ್ವರಿತ ಕಾರ್ಯಾಚರಣೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾಗಬಹುದಾಗಿದ್ದ ಸಂಚಾರ ದಟ್ಟಣೆಯನ್ನು ತಪ್ಪಿಸಿ, ಇತರ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Leave a Reply

Your email address will not be published. Required fields are marked *

error: Content is protected !!