November 6, 2026

ಹಾಲು, ಮೊಸರಿನ ದರ ಹೆಚ್ಚಳದ ಬೆನ್ನಲ್ಲೇ ತುಪ್ಪ, ಬೆಣ್ಣೆ ದರದಲ್ಲೂ ಹೆಚ್ಚಳ

0
image_editor_output_image-1519794311-1793908991373

ಬೆಂಗಳೂರು: ಹಾಲು, ಮೊಸರಿನ ದರ ಹೆಚ್ಚಳದ ಬೆನ್ನಲ್ಲೇ ತುಪ್ಪ, ಬೆಣ್ಣೆ ದರವನ್ನೂ ಹೆಚ್ಚಿಸಲಾಗಿದೆ. ತುಪ್ಪದ ದರವನ್ನು ಲೀಟರ್‌ಗೆ ₹750ರಿಂದ ₹850ಕ್ಕೆ ಹಾಗೂ ಬೆಣ್ಣೆ ದರವನ್ನು ₹700ರಿಂದ ₹780ಕ್ಕೆ ಹೆಚ್ಚಿಸಲಾಗಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿಯ ಮೂಲಗಳು ತಿಳಿಸಿವೆ.

ಮೊಸರಿನ ದರವನ್ನು ಲೀಟರ್‌ಗೆ 2ರಿಂದ 3 ರೂಪಾಯಿ ಕಡಿಮೆ ಮಾಡುವ ಸಾಧ್ಯತೆ ಇದ್ದು, ಈ ಬಗ್ಗೆ ಒಂದೆರಡು ದಿನಗಳಲ್ಲಿ ಅಧಿಕೃತ ಪ್ರಕಟಣೆ ಹೊರಬೀಳಲಿದೆ.

10 ಲಕ್ಷ ಲೀಟರ್ ಹೆಚ್ಚಳ: ಹಾಲಿನ ದರ ಹೆಚ್ಚಳವಾದ ಬೆನ್ನಲ್ಲೇ ಮಹಾಮಂಡಳಿಗೆ ಪೂರೈಕೆಯಾಗುವ ಹಾಲಿನ ಪ್ರಮಾಣ ನಿತ್ಯ 10 ಲಕ್ಷದಷ್ಟು ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ. ಅಧಿಕ ದರ ಸಿಗುತ್ತದೆ ಎಂಬ ಕಾರಣಕ್ಕಾಗಿ ರೈತರು ಖಾಸಗಿಯವರ ಬದಲು, ಕೆಎಂಎಫ್‌ಗೆ ಹಾಲು ನೀಡಲು ಮುಂದಾಗಿದ್ದು, ಇದರಿಂದಾಗಿ ಪೂರೈಕೆ ಹೆಚ್ಚಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!