ಜಮ್ಮು&ಕಾಶ್ಮೀರ: ಅನಂತನಾಗ್ ಹಿಮಪಾತದಲ್ಲಿ ಸಿಲುಕಿ ಇಬ್ಬರು ಮೃತ್ಯು:
ಸಾವಿನ ಸಂಖ್ಯೆ 5 ಕ್ಕೆ ಏರಿಕೆ
ಜಮ್ಮು&ಕಾಶ್ಮೀರ: ಸಿಮ್ಥಾನ್ ಪಾಸ್‌ನಲ್ಲಿ ನಿನ್ನೆ ರಾತ್ರಿ ಹಿಮಪಾತದಲ್ಲಿ ಅವರು ಪ್ರಯಾಣಿಸುತ್ತಿದ್ದ ವಾಹನ ಸಿಲುಕಿಕೊಂಡಿದ್ದರಿಂದ ಇಬ್ಬರು ಸಾವನ್ನಪ್ಪಿದ್ದು, ಇನ್ನಿಬ್ಬರನ್ನು ರಕ್ಷಿಸಲಾಗಿದೆ.
ರಕ್ಷಣಾ ತಂಡವು ಹಿಮದಿಂದ ಆವೃತವಾದ ಮತ್ತು ಮಂಜು ಮುಸುಕಿದ ಭೂಪ್ರದೇಶದ ಮೂಲಕ 30 ಕಿಮೀ ಕ್ರಮಿಸಿ, ಯಂತ್ರೋಪಕರಣಗಳ ನೆರವಿನಿಂದ 8 ಕಿಮೀ ನಡೆದು ಸ್ಥಳ ತಲುಪಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಸ್ಥಳದಲ್ಲಿ ಒಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರು ಪ್ರಯಾಣದ ಸಮಯದಲ್ಲಿ ಸಾವನ್ನಪ್ಪಿದರು” ಇಬ್ಬರು ಬದುಕುಳಿದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅನಂತನಾಗ್ ಜಿಲ್ಲಾಡಳಿತ, ಜಮ್ಮು ಮತ್ತು ಕಾಶ್ಮೀರ ಪೋಲಿಸ್ ಮತ್ತು ಸೇನೆಯು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿತ್ತು.
ಜಮ್ಮುವಿನ ಹಲವು ಭಾಗಗಳಲ್ಲಿ ಭಾರೀ ಮಳೆ ಮತ್ತು ಆಲಿಕಲ್ಲು ಚಂಡಮಾರುತಗಳು ಉಂಟಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಹಿಮಪಾತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳೆಗಳು ಹಾನಿಗೊಳಗಾಗುವುದರ ಜೊತೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಮತ್ತು ಮೊಘಲ್ ಮತ್ತು ಕಿಶ್ತ್ವಾರ್-ಸಿಮಠಾನ್ ರಸ್ತೆಗಳ ಸಂಚಾರವನ್ನು ಶನಿವಾರ ಸ್ಥಗಿತಗೊಳಿಸಲಾಗಿದೆ.