ಬಾಬಾಪೋರಾದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಹೊಡೆದುರುಳಿಸಿದ ಅಪರಿಚಿತ ಬಂದೂಕುಧಾರಿಗಳು
ಜಮ್ಮು&ಕಾಶ್ಮೀರ: ಭಾನುವಾರ ಶೋಪಿಯಾನ್‌ನ ಜೈನಾಪೋರಾ ಪ್ರದೇಶದ ಬಾಬಾಪೋರಾದಲ್ಲಿ ವ್ಯಕ್ತಿಯನ್ನು ಅಪರಿಚಿತ ಬಂದೂಕುಧಾರಿಗಳು ಹೊಡೆದುರುಳಿಸಿದ್ದಾರೆ.
ಇಲ್ಲಿಯವರೆಗೆ ಕಣಿವೆಯಲ್ಲಿ ಕನಿಷ್ಠ 11 ನಾಗರಿಕರು ಸಾವನ್ನಪ್ಪಿದ್ದಾರೆ. ಕೊಲೆಯಾದವರಲ್ಲಿ ಐವರು ಬಿಹಾರದ ಕಾರ್ಮಿಕರು, ಇಬ್ಬರು ಶಿಕ್ಷಕರು ಸೇರಿದಂತೆ ಮೂವರು ಕಾಶ್ಮೀರದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂದು ತಿಳಿದು ಬಂದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೂರು ದಿನಗಳ ಜಮ್ಮು ಮತ್ತು ಕಾಶ್ಮೀರ ಭೇಟಿಯ ನಡುವೆ ಇತ್ತೀಚೆಗೆ ನಾಗರಿಕರ ಮೇಲೆ ದಾಳಿ ನಡೆದಿದೆ. ಶನಿವಾರ, ಅಮಿತ್ ಶಾ ಭದ್ರತಾ ಪರಿಸ್ಥಿತಿ ಮತ್ತು ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆಯನ್ನು ಎದುರಿಸಲು ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು.