November 20, 2026

ವಿಟ್ಲ ಟಿಪ್ಪು ನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್‌ನ ನೂತನ ಸಮಿತಿ ರಚನೆ

0
image_editor_output_image-813803335-1795190779029

ವಿಟ್ಲ:ಕಳೆದ 16 ವರ್ಷಗಳಿಂದ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ವಿಟ್ಲ ಟಿಪ್ಪು ನಗರದ ದಾರುನ್ನಜಾತ್ ಎಜುಕೇಶನಲ್ ಸೆಂಟರ್‌ನ 2023-2026ನೇ ಸಾಲಿನ ವಾರ್ಷಿಕ ಮಹಾಸಭೆಯು ಬುಧವಾರ ಮಧ್ಯಾಹ್ನ 2:30ಕ್ಕೆ ಮರ್ಹೂಂ ಅಬೂಬಕ್ಕರ್ ಉಸ್ತಾದ್ ಸ್ಮಾರಕ ಭವನದಲ್ಲಿ ನಡೆಯಿತು.

ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದ ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಅವರ ಮಕ್ಬರದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶೈಖುನಾ ಮಹಮೂದುಲ್ ಫೈಝಿ ವಾಲೆ ಮುಂಡೋವು ಉಸ್ತಾದ್ ವಹಿಸಿದ್ದರು. ಅಸೈಯ್ಯದ್ ಶಮೀಮ್ ಅಲ್ ಬುಖಾರಿ ತಂಙಳ್ ಟಿಪ್ಪು ನಗರ ಸಭೆಯನ್ನು ಉದ್ಘಾಟಿಸಿದರು. ಅಸೈಯ್ಯದ್ ಶಿಹಾಬುದ್ದೀನ್ ತಂಙಳ್ ಪ್ರಾರ್ಥನೆಗೆ ನೇತೃತ್ವ ನೀಡಿದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸಖಾಫಿ ಸ್ವಾಗತಿಸಿ, ಸಭೆಯ ವಿಷಯಗಳನ್ನು ಮಂಡಿಸಿದರು. ಬಳಿಕ ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಹಮೀದ್ ಹಾಜಿ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿದರು. ಸಭೆಯು ವರದಿ ಮತ್ತು ಲೆಕ್ಕಪತ್ರಗಳನ್ನು ಸರ್ವಾನುಮತದಿಂದ ಅಂಗೀಕರಿಸಿ, 2026-2029ನೇ ಸಾಲಿನ ನೂತನ ಆಡಳಿತ ಸಮಿತಿಯನ್ನು ಆಯ್ಕೆ ಮಾಡಿತು.

**ನೂತನ ಸಮಿತಿಯ ಪದಾಧಿಕಾರಿಗಳು:**

– **ನಿರ್ದೇಶಕರು:** ಖಾಝಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್, ಶೈಖುನಾ ಸಯ್ಯಿದ್ ಆಟ್ಟಕೋಯ ತಂಙಳ್ ಕುಂಬೋಳ್

– **ಗೌರವಾಧ್ಯಕ್ಷರು:** ಇಮಾಮ್ ಮಹಮ್ಮದ್ ಮುಸ್ಲಿಯಾರ್ ಬಾಯಾರ್

– **ಅಧ್ಯಕ್ಷರು:** ಶೈಖುನಾ ಮಹಮೂದುಲ್ ಫೈಝಿ ವಾಲೆ ಮುಂಡೋವು ಉಸ್ತಾದ್, ಟಿಪ್ಪು ನಗರ

– **ಉಪಾಧ್ಯಕ್ಷರುಗಳು:** ಅಸೈಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ, ಅಬೂಬಕ್ಕರ್ ಹಾಜಿ ಹೊಸಂಗಡಿ, ಡಾ. ಹಸೈನಾರ್ ಟಿಪ್ಪು ನಗರ

– **ಜನರಲ್ ಮ್ಯಾನೇಜರ್:** ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ

– **ಕೋಶಾಧಿಕಾರಿ:** ಅಬೂಬಕ್ಕರ್ ಉಕ್ಕುಡ

– **ಪ್ರಧಾನ ಕಾರ್ಯದರ್ಶಿ:** ಉಸ್ಮಾನ್ ಸಖಾಫಿ ಕಡ್ವಾಯಿ

– **ಕಾರ್ಯದರ್ಶಿಗಳು:** ಸಿದ್ದೀಕ್ ಸಅದಿ ಟಿಪ್ಪು ನಗರ, ಅಬ್ದುಲ್ ಹಕೀಮ್ ಕೆ.

– **ಸಂಘಟನಾ ಕಾರ್ಯದರ್ಶಿ:** ಅಬ್ದುಲ್ ಖಾದರ್ ಫೈಝಿ

**ಸಮಿತಿ ಸದಸ್ಯರು:** ಮುಹಮ್ಮದಲಿ ಸಖಾಫಿ ಅಶ್ಅರಿಯ್ಯ, ಯೂಸುಫ್ ಸಾಜ, ಉಮ್ಮರ್ ವಿಟ್ಲ, ಅಬ್ಬಾಸ್ ಟಿಪ್ಪು ನಗರ, ಹಸೈನಾರ್ ಮುಸ್ಲಿಯಾರ್ ಬಾರೆಬೆಟ್ಟು, ಅಬ್ದುಲ್ ಹಮೀದ್ ಸಖಾಫಿ ಹಾಗೂ ಇಬ್ರಾಹಿಂ ಮುಸ್ಲಿಯಾರ್ ಟಿಪ್ಪು ನಗರ ಸೇರಿದಂತೆ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಯಿತು.

ಸಭೆಯ ಕೊನೆಯಲ್ಲಿ ಸಂಸ್ಥೆಯ ಹಿತೈಷಿಗಳು, ಪ್ರವಾಸಿಗಳು ಹಾಗೂ ಊರಿನ ಮತ್ತು ಪರವೂರಿನ ಮಹನೀಯರ ಒಳಿತಿಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಸಂಘಟನಾ ಕಾರ್ಯದರ್ಶಿ ಅಬ್ದುಲ್ ಖಾದರ್ ಫೈಝಿ ವಂದಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!