ವಿಟ್ಲ: ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ: ಶಾಸಕ ಅಶೋಕ್ ರೈ ವಿರುದ್ಧ ಗುಡುಗಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ
ವಿಟ್ಲ: ವಿಟ್ಲದ ಭಾರತೀಯ ಜನತಾ ಪಾರ್ಟಿಯ ಬಿಜೆಪಿ ಮಹಾಶಕ್ತಿಕೇಂದ್ರದ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ದ ನ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ ಹಾಗೂ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್/ನಗರಾಡಳಿತ ಕಚೇರಿಗಳ ಎದುರು ನಡೆಯುತ್ತಿರುವ ‘ ನಮ್ಮ ಹಕ್ಕು ನಮಗೆ ನೀಡಿ ಘೋಷಣೆಯಡಿ ಆಯೋಜಿಸಲಾಗಿದ್ದ’ ಪ್ರತಿಭಟನಾ ಸಭೆಯ ಸಮಾರೋಪ ವಿಟ್ಲದಲ್ಲಿ ಶುಕ್ರವಾರ ನಡೆಯಿತು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಮಾತನಾಡಿ
ಅಭಿವೃದ್ಧಿ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ , ರೀಲ್ಸ್ ಹರಿಯ ಬಿಟ್ಟು ಅಪಪ್ರಚಾರ ಮಾಡುವುದು ಬಿಟ್ಟು ಒಂದೇ ವೇದಿಕೆಯಲ್ಲಿ ಮಾಧ್ಯಮಗಳ ಮುಂದೆ ಅಂಕಿ ಅಂಶಗಳನ್ನು ಮುಂದಿಟ್ಟು ಚರ್ಚೆ ಮಾಡೋಣ. ನಾನು ಯಾವುದೇ ವೇದಿಕೆಯಲ್ಲಿ ಬಂದು ಮಾತನಾಡಲು ಸಿದ್ಧ
ಎಂದು ಪುತ್ತೂರು ಶಾಸಕ ಅಶೋಕ ಕುಮಾರ್ ರೈಯವರಿಗೆ ಸವಾಲು ಹಾಕಿದರು.
ಶಾಸಕರ ಸುಳ್ಳುಗಳನ್ನು ವಿಟ್ಲ ಬಸ್ ನಿಲ್ದಾಣದಲ್ಲಿ ಹರಾಜಿಗೆ ಹಾಕಲಾಗಿದೆ. ಮಾಜಿ ಶಾಸಕರ ಅನುದಾನಗಳನ್ನು ಅಭಿವೃದ್ಧಿ ಕಾರ್ಯಗಳನ್ನು ತನ್ನದು ಎನ್ನುವ ಶಾಸಕರು ಬಸವ ಯೋಜನೆ ಅಂಬೇಡ್ಕರ್ ಯೋಜನೆ ಮೊದಲಾದ ವಸತಿ ಅವಕಾಶ ಯೋಜನೆಗಳನ್ನು ಬಳಕೆ ಮಾಡಿಲ್ಲ ಎಂದರು.
84,000 ರೂ ಪಾವತಿಸಲಿ*
ಗ್ಯಾರಂಟಿ ಹೆಸರಿನಲ್ಲಿ ಬಾಕಿ ಇರುವ 84,000 ರೂ. ಗಳನ್ನು ಪಾವತಿಸಲಿ,ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗನವಾಡಿ ಕಾರ್ಯಕರ್ತೆಯರ ವೇತನ ನೀಡುವ ವ್ಯವಸ್ಥೆ ಮಾಡಲಿ ಎಂದ ಅವರು ಬೆಲೆ ಏರಿಕೆ ಅಷ್ಟೇ ಕಾಂಗ್ರೆಸ್ ಸರಕಾರದ ಸಾಧನೆ . ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಇಳಿಸಲಿ ರಾಜ್ಯ ಸರಕಾರ ಮುಂದಾಗಲಿ ಎಂದರು. ತಹಶಿಲ್ದಾರರ ಸಹಿತ ಸರಕಾರಿ ಅಧಿಕಾರಿಗಳು ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡಿದರೆ ಅವರ ವಿರುದ್ಧ ಮುಂದೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುವುದು ಎಂದರು
ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಮಾತನಾಡಿ
ಅಮೃತ್ ಯೋಜನೆ ಸಹಿತ ಕೇಂದ್ರ ಸರಕಾರದ
ಯೋಜನೆಗಳನ್ನು ಕೂಡ ರಾಜ್ಯ ಸರಕಾರದ ಯೋಜನೆ ಅನ್ನುತ್ತಾ ಪ್ರಚಾರ ಮಾಡಿ ಮೈಲೇಜ್ ತೆಗೆದುಕೊಳ್ಳುವ ಪ್ರಯತ್ನವನ್ನು ಖಂಡಿಸಿದರು.
ಕೇಂದ್ರದ ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯ ಮಾಡುವ ಶಾಸಕರ ನ್ನುಮತ್ತು ಸಂಬಂಧಿಸಿದ ಸರಕಾರಿ ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡರು . ಮುಂದೆ ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರಕಾರ ತೊಲಗಿ ಬಿಜೆಪಿ ಸರಕಾರ ಬರಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಸಭಾ ಕಾರ್ಯಕ್ರಮದ ಮೊದಲು ನಿರೀಕ್ಷಣಾ ಮಂದಿರದ ಬಳಿಯಿಂದ ಜೈನ ಬಸದಿ ತನಕ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಘೋಷಣೆ ಕೂಗುತ್ತಾ ಪಾದಯಾತ್ರೆ ನಡೆಯಿತು.
ವಿಧಾನ ಪರಿಷತ್ ಸದಸ್ಯ
ಕಿಶೋರ್ ಕುಮಾರ್ ಬೊಟ್ಯಾಡಿ ಹಾಗೂ
ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಕುಂಪಲ ಸಭೆಯನ್ನು ಉದ್ದೇಶಿಸಿ ಮಾತನಾಡಿದರು
ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಸಂಜೀವ ಮಠಂದರೂರು, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯದರ್ಶಿ ಆರ್. ಸಿ. ನಾರಾಯಣ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಸ್ಥಾಯಿ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ,
ಪುತ್ತೂರು ನಗರ ಮಂಡಲ ಅಧ್ಯಕ್ಷ ಶಿವಕುಮಾರ್,
ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ ಯಾದವ್,
ಜಿಲ್ಲಾ ಬಿಜೆಪಿ ನಾಯಕರಾದ ಪ್ರಸನ್ನ ಮಾರ್ತ, ಪ್ರೇಮಾನಂದ ಶೆಟ್ಟಿ, ಬೂಡಿಯಾರು ರಾಧಾಕೃಷ್ಣ ರೈ,
ವಿಟ್ಲ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ
ಅರುಣ್ ವಿಟ್ಲ,
ಬಿಜೆಪಿ ಪ್ರಮುಖರಾದ ಪುನೀತ ಮಾಡ್ತಾರು,
ಶ್ರೀಕೃಷ್ಣ ವಿಟ್ಲ, ರವಿಪ್ರಕಾಶ್, ಮಂಜುನಾಥ ಕಲ್ಲಕಟ್ಟಮತ್ತಿತರರು ಉಪಸ್ಥಿತರಿದ್ದರು.
ಸಭೆಯಲ್ಲಿ ಸಾಜ ರಾಧಾಕೃಷ್ಣ ಆಳ್ವ, ರಾಜೇಶ ಬನ್ನೂರು, ಚಂದ್ರಶೇಖರ ಬಪ್ಪಳಿಗೆ,ಅಪ್ಪಯ್ಯ ಮಣಿಯಾಣಿ, ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯರು
ಪಕ್ಷದ ಜಿಲ್ಲೆಯ ಮತ್ತು ವಸ್ಥಳೀಯ ಮುಖಂಡರು ಭಾಗವಹಿಸಿದ್ದರು.
ತುಳಸಿದಾಸ ಶೆಣೈ ವಂದೇ ಮಾತರಂ ಹಾಡಿದರು.
ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಉದಯ ಕುಮಾರ್ ಆಲಂಗಾರು ಸ್ವಾಗತಿಸಿದರು.
ಪದಾಧಿಕಾರಿ ನರ್ಸಪ್ಪ ಪೂಜಾರಿ ನಿಡ್ಯ ಪ್ರಸ್ತಾವನೆಗೈದರು.
ಪ್ರಧಾನ ಕಾರ್ಯದರ್ಶಿ ಹರೀಶ್ ಸಿ. ಎಚ್. ವಂದಿಸಿದರು
ಮೋಹನದಾಸ ಉಕ್ಕುಡ ಕಾರ್ಯಕ್ರಮ ನಿರೂಪಿಸಿದರು




