ಕೊಡಂಗಾಯಿ: SKSSF ಮೆಂಬರ್‌ಶಿಪ್ ಕಾರ್ಡ್ ವಿತರಣೆ ಸಂಪನ್ನ – ಮುಸಾಬಕ ಯಶಸ್ಸಿಗೆ ಕರೆ
SKSSF ಕೊಡಂಗಾಯಿ ಶಾಖೆಯ ಮೆಂಬರ್‌ಶಿಪ್ ಕಾರ್ಡ್ ವಿತರಣಾ ಕಾರ್ಯಕ್ರಮವು ಗುರುವಾರದಂದು ಕೊಡಂಗಾಯಿ ಕಾರ್ಯಾಲಯದಲ್ಲಿ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖಾ ಅಧ್ಯಕ್ಷ ಹನೀಫ್ P ವಹಿಸಿದ್ದರು. ಕೆ.ಕೆ. ಇಸ್ಮಾಯಿಲ್ ಅಸ್ನವಿ ಅವರು ದುವಾ ನೆರವೇರಿಸಿದರು.
ಇಬ್ರಾಹಿಂ ಝೈನಿ ಅವರು ಸ್ವಾಗತ ಭಾಷಣ ಮಾಡಿದರು. ಕೆ.ಎಂ.ಎ ಕೊಡುಗಾಂಯಿ ಅವರು ವಿಷಯ ಮಂಡನೆ ಮಾಡಿ, SKSSF ಸಂಘಟನೆಯ ಉದ್ದೇಶ, ಸದಸ್ಯತ್ವದ ಮಹತ್ವ ಹಾಗೂ ಕಾರ್ಯಕರ್ತರ ಜವಾಬ್ದಾರಿಯ ಕುರಿತು ವಿವರವಾಗಿ ಮಾತನಾಡಿದರು.
*ಪುಣ್ಯ ಸಮಸ್ತದ ಆಶಯವನ್ನು ಈಡೇರಿಸುವ ಸಂಕಲ್ಪ :*
ಈ ಸಂದರ್ಭದಲ್ಲಿ ಮಾತನಾಡಿದ ನಾಯಕರು, ಪುಣ್ಯ ಸಮಸ್ತದ ಆಶಯವನ್ನು ಈಡೇರಿಸುವುದೇ ನಮ್ಮೆಲ್ಲರ ಪ್ರಮುಖ ಜವಾಬ್ದಾರಿ ಎಂದು ತಿಳಿಸಿದರು.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ತೋರಿಸಿದ ದೀನಿ ಮಾರ್ಗದಲ್ಲಿ ನಡೆದು, ಈಮಾನನ್ನು ಕಾಪಾಡಿ, ಮದರಸ, ಮಸೀದಿ, ಮಹಲ್ಲುಗಳನ್ನು ಗಟ್ಟಿಗೊಳಿಸಿ, ಮುಂದಿನ ಪೀಳಿಗೆಯನ್ನು ದೀನಿ ವಿದ್ಯೆ ಹಾಗೂ ಸಂಸ್ಕಾರದೊಂದಿಗೆ ಬೆಳೆಸುವುದೇ ಸಮಸ್ತದ ಆಶಯ. ಅದನ್ನು ಈಡೇರಿಸಲು ಪ್ರತಿಯೊಬ್ಬ SKSSF ಕಾರ್ಯಕರ್ತನು ಸಕ್ರಿಯನಾಗಬೇಕು ಎಂದು ಕರೆ ನೀಡಲಾಯಿತು.
ಉಸ್ತಾದರು ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ, ಸಮಸ್ತದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ, ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಸಮಸ್ತದ ಆಶಯ ಸಾಕಾರಗೊಳ್ಳುತ್ತದೆ ಎಂದು ಅವರು ಹೇಳಿದರು.
*ಈ ಸಂದರ್ಭದಲ್ಲಿ ಮುಸಾಬಕವನ್ನು ಯಶಸ್ವಿಗೊಳಿಸಲು ಕರೆ ನೀಡಲಾಯಿತು.*
ಮುಂಬರುವ ಮುಸಾಬಕ ಸ್ಪರ್ಧೆಯಲ್ಲಿ ಸಿರಾಜುಲ್ ಇಸ್ಲಾಂ ಮದ್ರಸ ಎಂ ಜೆ ಎಂ ಕೊಡಂಗಾಯಿ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಉತ್ತಮ ಸಾಧನೆ ಮಾಡಲಿ ಎಂದು ಹಾರೈಸಿ, ಮದರಸ ವಿದ್ಯಾರ್ಥಿಗಳನ್ನು ಮುಸಾಬಕಗೆ ಸಜ್ಜುಗೊಳಿಸಲು ಪ್ರತಿಯೊಬ್ಬ ಕಾರ್ಯಕರ್ತನು ಶ್ರಮಿಸಬೇಕು, ಮಕ್ಕಳನ್ನು ಪ್ರೋತ್ಸಾಹಿಸಬೇಕು, ಉಸ್ತಾದರು ಹಾಗೂ ಪೋಷಕರ ಸಹಕಾರ ಪಡೆಯಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
ಸಂಘಟನೆಯ ಸದಸ್ಯತ್ವವು ಕೇವಲ ಗುರುತಿನ ಚೀಟಿಯಲ್ಲ, ಅದು ಸೇವೆ, ಶಿಸ್ತು ಮತ್ತು ಒಗ್ಗಟ್ಟಿನ ಪ್ರತೀಕವಾಗಿದೆ ಎಂದು ಅವರು ತಮ್ಮ ಭಾಷಣದಲ್ಲಿ ತಿಳಿಸಿದರು. ಮಸೀದಿ, ಮದರಸ ಹಾಗೂ ಮಹಲ್ಲಿನ ಅಭಿವೃದ್ಧಿಯಲ್ಲಿ ಯುವಜನರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಖೆಯ ಅನೇಕ ಕಾರ್ಯಕರ್ತರಿಗೆ ಮೆಂಬರ್‌ಶಿಪ್ ಕಾರ್ಡ್‌ಗಳನ್ನು ವಿತರಿಸಲಾಯಿತು. ಕಾರ್ಡ್ ಪಡೆದ ಸದಸ್ಯರು ಸಂಘಟನೆಯ ನಿಯಮಗಳನ್ನು ಪಾಲಿಸಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದರು.
ಹಸೈನಾರ್ T.M ಅವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಶಾಖೆಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.




