ಪುತ್ತೂರು: ಆಕರ್ಷಣ್ ಇಂಡಸ್ಟ್ರಿಸ್ 26ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ:
ಗ್ರಾಹಕರಿಗೆ ಉಚಿತ ಫಿಕ್ಸಿಂಗ್ ಆಫರ್ ಸೌಲಭ್ಯ
ಪುತ್ತೂರು: ಸಿಮೆಂಟ್ ಉತ್ಪನ್ನಗಳ ತಯಾರಿಕೆಯಲ್ಲಿ ಮನೆ ಮಾತಾಗಿರುವ ಪುತ್ತೂರಿನ ಮುಕ್ರಂಪಾಡಿಯಲ್ಲಿರುವ ಆಕರ್ಷಣ್ ಇಂಡಸ್ಟ್ರೀ ೨೬ ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದಲ್ಲಿದೆ. ಈ ಸಂಭ್ರಮವನ್ನು ಗ್ರಾಹಕರೊಂದಿಗೆ ಹಂಚಿಕೊಳ್ಳಲು ಸಂಸ್ಥೆ ಇಚ್ಚಿಸಿಕೊಂಡಿಸಿದ್ದು ಸಂಸ್ಥೆಯ ವತಿಯಿಂದ ಉತ್ಪಾದಿಸಲ್ಪಡುತ್ತಿರುವ ಆತ್ಯಾಧುನಿಕ ಟೆಕ್ನಾಲಜಿಯನ್ನು ಬಳಿಸಿ ನಿರ್ಮಿಸುತ್ತಿರುವ ರೆಡಿಮೇಡ್ ಕೌಂಪೌಂಡ್ ರೆಡಿವಾಲ್ ನ್ನು ಬುಕ್ ಮಾಡಿದವರಿಗೆ ಉಚಿತವಾಗಿ ಫಿಕ್ಸ್ ಮಾಡಿಕೊಡುವುದಾಗಿ ಸಂಸ್ಥೆ ಗ್ರಾಹಕರಿಗೆ ಆಫರ್ ನೀಡಿದೆ.
ಈ ಆಫರ್ ಮೂರು ದಿನಗಳು ಮಾತ್ರ ಇರಲಿದ್ದು ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.


ಸಾಧಾರಣವಾಗಿ ಮನೆಯ ಆವರಣಕ್ಕೆ ಹೆಚ್ಚಾಗಿ ಕೆಂಪು ಕಲ್ಲಿನಿಂದ ಆವರಣಗೋಡೆಯನ್ನು ನಿರ್ಮಾಣ ಮಾಡುತ್ತಾರೆ. ಕೆಂಪು ಕಲ್ಲಿನಿಂದ ಆವರಣಗೋಡೆ ನಿರ್ಮಾಣ ಮಾಡುವ ಪೃವೃತ್ತಿ ಅನೇಕ ವರ್ಷಗಳಿಂದ ಚಾಲ್ತಿಯಲ್ಲಿದೆ. ಇದಕ್ಕಾಗಿ ತುಂಬಾ ಖರ್ಚು ಕೂಡಾ ಮಾಡುತ್ತಿದ್ದಾರೆ. ಕಲ್ಲಿನ ಕೌಂಪೌಂಡ್ ನಿರ್ಮಾಣಕ್ಕೆ ಖರ್ಚಿನ ಜೊತೆಗೆ ಸಮಯವೂ ಬೇಕಾಗುತ್ತದೆ. ಒಂದು ಬಾರಿ ಕೌಂಪೌಂಡ್ ಕಟ್ಟಿದರೆ ಮತ್ತೆ ಅದನ್ನು ತೆರವು ಮಾಡಲೂ ಸಾಧ್ಯವಿಲ್ಲ, ತೆರವು ಮಾಡಿದರೆ ಬಳಸಿದ ಕಲ್ಲು ಹಾಗೂ ಖರ್ಚು ಎಲ್ಲವೂ ನಷ್ವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಇದನ್ನು ಮನಗಂಡ ಆಕರ್ಷಣ್ ಸಂಸ್ಥೆ ಸಿಮೆಂಟ್‌ನಿಂದ ರೆಡಿಮೇಡ್ ಕೌಂಪೌಂಡ್ ರೆಡಿವಾಲ್ ನಿರ್ಮಾಣಕ್ಕೆ ಕೈ ಹಾಕಿದೆ. ಇದಕ್ಕಾಗಿ ಅತ್ಯಾಧುನಿಕ ಟೆಕ್ನಾಲಜಿಯನ್ನು ಬಳಸಲಾಗಿದೆ. ಸುದೀರ್ಘ ಬಾಳಿಕೆಯ ಮತ್ತು ಯಾವಾಗ ಬೇಕಾದರೂ ಸ್ಥಳಾಂತರ ಮಾಡಬಹುದಾದ ವ್ಯವಸ್ಥೆಯೂ ಇದರಲ್ಲಿ ಅಡಕವಾಗಿದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಕೌಪೌಂಡ್ ನಿರ್ಮಾಣ ಮಾಡಬಹುದಾಗಿದೆ. ಈಗಾಗಲೇ ಅನೇಕ ಮಂದಿ ಗ್ರಾಹಕರು ಇದನ್ನು ಬಳಸಿ ಆವರಣಗೋಡೆ ನಿರ್ಮಾಣ ಮಾಡಿದ್ದು ಉತ್ತಮ ಪ್ಲಾನ್ ಎಂಬ ಪ್ರಶಂಸೆಗೂ ಪಾತ್ರವಾಗಿದೆ. ಸಂಸ್ಥೆಯು ತನ್ನ ೨೬ ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರಿಗೆ ಉಚಿತ ಫಿಕ್ಸಿಂಗ್ ಆಫರ್ ಸೌಲಭ್ಯವನ್ನು ಕಲ್ಪಿಸಿದೆ. ಗ್ರಾಹಕರು ಈಗ ಬುಕ್ ಮಾಡಿದಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ. ಗ್ರಾಹಕರು ೬೩೬೪೧೪೩೩೭೫, ೯೩೪೧೫೫೭೩೭೦/೭೨ ಗೆ ಕರೆ ಮಾಡಿ ಬುಕ್ ಮಾಡಿಕೊಳ್ಳಬಹುದಾಗಿದೆ.


ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ೨೬ ವರ್ಷಗಳಲ್ಲಿ ಅನುಭವ ಇರುವ ಆಕರ್ಷಣ್ ಸಂಸ್ಥೆಯಿಂದ ರೆಡಿಹೋಂ ಎಂಬುದು ಇನ್ನೊಂದು ಉತ್ಪನ್ನ. ಸಂಪೂರ್ಣ ಸಿಮೆಂಟ್ ಬಳಕೆ ಮಾಡಿ ಈ ಮನೆಯನ್ನು ನಿರ್ಮಾಣ ಮಾಡಲಾಗಿದೆ. ಸಂಸ್ಥೆಯ ಪರಿಕಲ್ಪನೆಯಲ್ಲಿ ಮೂಡಿ ಬಂದ ಈ ಮನೆ ಪರಿಸರ ಪ್ರೇಮಿ ಮನೆಯಾಗಿದ್ದು ಮರದ ಬಳಕೆ ಇಲ್ಲ. ಆದುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಣ ಮಾಡಲಾಗುತ್ತಿದೆ.
೨೫ ವರ್ಷಗಳ ಸುದೀರ್ಘ ಬಾಳ್ವಿಕೆಯ ಝಿಂಧಾಲ್ ಫಪ್ ಶೀಟನ್ನು ಛಾವಣಿಗೆ ಬಳಕೆ ಮಾಡಿರುವ ಕಾರಣ ಶಬ್ದ ರಹಿತವಾಗಿದ್ದು ಮಾತ್ರವಲ್ಲದೆ ಮನೆಯ ಒಳಭಾಗವನ್ನು ತಂಪಾಗಿಸುವಲ್ಲಿ ಸಹಕಾರಿಯಾಗಿದೆ. ಎಲ್ಲಾ ಕಾಲಕ್ಕೂ ಸರಿಹೊಂದುವಂತೆ ಮನೆ ನಿರ್ಮಾಣ ಮಾಡಲಾಗಿದ್ದು, ತುಕ್ಕು ನಿರೋಧಕವಾಗಿರುವ ಕಾರಣ ಕರಾವಳಿ ಜಿಲ್ಲೆಗಳಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಿದೆ. ಕೇವಲ ಏಳು ದಿನಗಳಲ್ಲಿ ಈ ಮನೆಯ ನಿರ್ಮಾಣ ಕಾರ್ಯ ನಡೆಯುತ್ತದೆ. ರೆಡಿಹೋಂ ಮನೆಗೆ ಉತ್ತಮ ಬೇಡಿಕೆ ಇದ್ದು ಗ್ರಹಕರಿಗೆ ಕೈಗೆಟಕುವ ಧರದಲ್ಲಿ ನಿರ್ಮಾಣ ಮಾಡುವುದೇ ಸಂಶ್ಥೆಯ ಉದ್ದೇಶವಾಗಿದೆ.




