ವಿಟ್ಲ: ಡಿ’ ಗ್ರೂಪ್ ವತಿಯಿಂದ ಈದ್ ಕಿಟ್ ವಿತರಣೆ
ವಿಟ್ಲ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಿ’ ಗ್ರೂಪ್ ವಿಟ್ಲ ಇದರ ವತಿಯಿಂದ ಬಡ ಅರ್ಹ ಕುಟುಂಬಗಳಿಗೆ ಈದ್ ಕಿಟ್ ವಿತರಿಸುವ ಕಾರ್ಯಕ್ರಮ ಸಂಸ್ಥೆಯ ಮೇಗಿನಪೇಟೆಯ ಕಚೇರಿಯಲ್ಲಿ ಅಧ್ಯಕ್ಷರಾದ ಶಾಕಿರ್ ಅಳಕೆಮಜಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಡಿ’ ಗ್ರೂಪ್ ನ ಗೌರವಾಧ್ಯಕ್ಷರಾದ ಝುಬೈರ್ ಮಾಸ್ಟರ್ ದುವಾ ನೆರವೇರಿಸಿದರು. ಹೊರೈಝನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಅಝೀಝ್ ಸನ, ಹೈಕೋರ್ಟ್ ನ ನ್ಯಾಯವಾದಿ ಅನ್ಸಾರ್ ಎ.ಎಸ್, ಕಾರ್ಯದರ್ಶಿ ರಾಝಿಕ್ ಒಕ್ಕೆತ್ತೂರು, ಕೋಶಾಧಿಕಾರಿ ಬಶೀರ್ ಬೊಬ್ಬೆಕೇರಿ, ಸದಸ್ಯರಾದ ಸಮದ್ ಮೇಗಿನಪೇಟೆ, ಹಂಝ ವಿಟ್ಲ, ವಿ.ಎಚ್.ರಿಯಾಝ್, ಹಮೀದ್ ಕಲ್ಲಿಪಾಲ ಮುಂತಾದವರು ಉಪಸ್ಥಿತರಿದ್ದರು.
ಅಬೂಬಕರ್ ಅನಿಲಕಟ್ಟೆ ವಂದಿಸಿದರು.




