April 5, 2025

ಓವೈಸಿಯನ್ನು ಬಂಧಿಸಿದರೆ 22 ಲಕ್ಷ ರೂ. ಬಹುಮಾನ:
ಬಲಪಂಥೀಯ ಸದಸ್ಯರಿಂದ ಘೋಷಣೆ

0

ಗುರುಗ್ರಾಮ್: ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ಅವರ ಬಿಡುಗಡೆಗೆ ಒತ್ತಾಯಿಸಿ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಗುರುಗ್ರಾಮ್‌ದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾತನಾಡಿದ ಹಿಂದೂ ಮುಖಂಡ ಮತ್ತು ವಕೀಲ ಕುಲಭೂಷಣ್ ಭಾರದ್ವಾಜ್, ‘ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ. ಸಂತ ಕಾಳಿಚರಣ್ ಅವರನ್ನು ನಿರ್ದಿಷ್ಟ ಕಾರ್ಯಸೂಚಿಯ ಕಾರಣಕ್ಕಾಗಿ ಬಂಧಿಸಲಾಯಿತು. ಪೊಲೀಸರು ಮತ್ತು ಸರ್ಕಾರ ಓವೈಸಿಯನ್ನು ಏಕೆ ಬಂಧಿಸಿಲ್ಲ? ಓವೈಸಿಯನ್ನು ಬಂಧಿಸುವ ಪೊಲೀಸ್ ಅಧಿಕಾರಿಗೆ ₹ 22 ಲಕ್ಷ ನಗದು ಬಹುಮಾನ ನೀಡಲಾಗುವುದು’ ಎಂದು ಘೋಷಿಸಿದ್ದಾರೆ.

‘ಇತ್ತೀಚೆಗೆ, ಹೈದರಾಬಾದ್ ಸಂಸದ ಓವೈಸಿ ಅವರ ಭಾಷಣದ ದಿನಾಂಕವಿಲ್ಲದ ವಿಡಿಯೊ ಕ್ಲಿಪ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಾಷಣದ ವೇಳೆ ಅವರು ಹಿಂದೂಗಳಿಗೆ ಬೆದರಿಕೆ ಹಾಕಿದ್ದಾರೆ’ ಎಂದೂ ಹಲವು ಬಲಪಂಥೀಯ ಕಾರ್ಯಕರ್ತರು ಆರೋಪಿಸಿದ್ದಾರೆ.

 

 

ಇಲ್ಲಿನ ಜಿಲ್ಲಾಧಿಕಾರಿ ನಿವಾಸದ ಎದುರಿನ ಟ್ಯಾಂಕ್ ಪಾರ್ಕ್‌ನಲ್ಲಿ ಜಮಾಯಿಸಿದ ಪ್ರತಿಭಟನನಿರತರು, ಕಾಳಿಚರಣ್ ಅವರನ್ನು ಬಿಡುಗಡೆ ಮಾಡಬೇಕು ಮತ್ತು ಓವೈಸಿಯನ್ನು ಬಂಧಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತಾ ಮಿನಿ ಸೆಕ್ರೆಟರಿಯೇಟ್‌ವರೆಗೆ ಮೆರವಣಿಗೆ ನಡೆಸಿದರು. ನಂತರ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *

You may have missed

error: Content is protected !!