ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ಇರಾನ್ ಗುಪ್ತಚರ ಸಚಿವರ ಮೃತ್ಯು
ಇರಾನ್: ಭಯೋತ್ಪಾದನಾ ದೇಶವಾದ ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ಇರಾನ್ ಗುಪ್ತಚರ ಸಚಿವ ಇಸ್ಮಾಯಿಲ್ ಖತೀಬ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ನ ಗುಪ್ತಚರ ಸಚಿವ ಮೃತಪಟ್ಟಿದ್ದಾರೆ. ಗುಪ್ತಚರ ಇಲಾಖೆಯ ಎಸ್ಮಾಯಿಲ್ ಖತೀಬ್ ಅವರ ಹತ್ಯೆಯನ್ನು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ದೃಢಪಡಿಸಿದ್ದಾರೆ. ಈ ದಾಳಿಯನ್ನು ಅವರು “ಹೇಡಿತನದ ಹತ್ಯೆ” ಎಂದು ಕರೆದಿದ್ದಾರೆ.
ಇಸ್ರೇಲ್ ತನ್ನ ಪಡೆಗಳು ಟೆಹ್ರಾನ್ ಮೇಲೆ ರಾತ್ರಿಯಿಡೀ ನಡೆಸಿದ ವೈಮಾನಿಕ ದಾಳಿ ನಡೆಸಿ ಸಚಿವ ಎಸ್ಮಾಯಿಲ್ ಅವರನ್ನು ಹತ್ಯೆ ಮಾಡಿವೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಇರಾನ್ ಕೂಡ ಈ ಬಗ್ಗೆ ದೃಢಪಡಿಸಿದೆ.




