January 31, 2026

ಕೋಮುವಾದಿ ಮನಸ್ಥಿತಿಯಿಂದ ಬಾಲಿವುಡ್‌ನಲ್ಲಿ ನನಗೆ 8 ವರ್ಷಗಳಿಂದ ಅವಕಾಶ ಸಿಗ್ತಿಲ್ಲ: ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್

0
image_editor_output_image-555246915-1768608284282.jpg

ಮುಂಬೈ: ಆಸ್ಕರ್ ಅವಾರ್ಡ್ ಗೆದ್ದಿರುವ ಸಂಗೀತ ಮಾಂತ್ರಿಕ, ಎ.ಆರ್. ರೆಹಮಾನ್ ಅವರ ಒಂದೇ ಒಂದು ಒಂದು ಹೇಳಿಕೆ ಬಾಲಿವುಡ್‌ನಲ್ಲಿ ಅಲೆ ಎಬ್ಬಿಸಿದೆ. ಬಾಲಿವುಡ್‌ನಲ್ಲಿ ನನಗೆ 8 ವರ್ಷಗಳಿಂದ ಅವಕಾಶ ಸಿಗ್ತಿಲ್ಲ. ಕೋಮುವಾದಿ ಮನಸ್ಥಿತಿಯೂ ಇದಕ್ಕೆ ಕಾರಣವಿರಬಹುದು ಎಂದು ಹೇಳಿದ್ದಾರೆ.

ಬಿಬಿಸಿ ಏಷ್ಯನ್ ನೆಟ್ವರ್ಕ್ ಸಂದರ್ಶನದಲ್ಲಿ ಮಾತಾಡಿರುವ ರೆಹಮಾನ್, ನಾನು ಕೆಲಸ ಹುಡುಕಿ ಹೋಗಲ್ಲ. ನನ್ನನ್ನ ಅರಸಿ ಬರುವ ಕೆಲಸವನ್ನು ಅತ್ಯಂತ ಶ್ರದ್ಧೆ, ಪ್ರಾಮಾಣಿಕವಾಗಿ ಮಾಡ್ತೇನೆ. 90ರ ದಶಕದಲ್ಲಿ ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡುವಾಗ ಈ ರೀತಿಯ ಯಾವುದೇ ಪೂರ್ವಾಗ್ರಹ – ಪಕ್ಷಪಾತ ಇರಲಿಲ್ಲ. ಈಗ ನನ್ನ ಕಿವಿಗೆ ಬಿದ್ದಿದೆ. ಮ್ಯೂಸಿಕ್‌ಕಂಪನಿಯೊಂದು ನಿಮ್ಮನ್ನು ಬದಿಗೊತ್ತಿ ಐವರು ಸಂಗೀತ ನಿರ್ದೇಶಕರ ಜೊತೆ ಒಪ್ಪಂದ ಮಾಡಿಕೊಂಡಿದೆ ಅಂದಿದ್ದಾರೆ.

ಹಾಗಾದರೆ ನಾನು ನನ್ನ ಕುಟುಂಬದ ಜೊತೆ ಸಮಯ ಕಳೀಬೋದು ಅಂದಿದ್ದೆ. ಆದರೆ, ಕಳೆದ 8 ವರ್ಷಗಳಲ್ಲಿ ಅಧಿಕಾರ ಬದಲಾವಣೆ ಆಗಿದ್ದು, ಸೃಜನಶೀಲತೆ ಇಲ್ಲದವರು ಈಗ ಎಲ್ಲವನ್ನೂ ನಿರ್ಣಯಿಸ್ತಿದ್ದಾರೆ. ಇದು ಮತೀಯವಾದವೂ ಇರಬಹುದು ಅಂದಿದ್ದಾರೆ. ರೋಜಾ, ಬಾಂಬೆ, ದಿಲ್‌ಸೇ, ತಾಲ್ ಚಿತ್ರಗಳಂಥ ಎವರ್‌ಗ್ರೀನ್ ಹಾಡು-ಸಂಗೀತ ಕೊಟ್ಟಿದ್ದರೂ ಈಗಲೂ ಅಲ್ಲಿ ನಾನು ಹೊರಗಿನವನಾಗಿದ್ದೇನೆ. ಸಂಗೀತ ದಂತಕಥೆ ಇಳಯರಾಜಾ ಅವರ ಸ್ಥಿತಿಯೂ ಹಾಗೇ ಆಗಿದೆ ಅಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!