ರಾಹುಲ್ ಗಾಂಧಿಗೆ ಜೆರ್ಸಿ ನೀಡಿದ ಫುಟ್ಬಾಲ್ ತಾರೆ ಮೆಸ್ಸಿ
ಹೈದರಾಬಾದ್: ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ 2025 ರ ಗೋಟ್ ಇಂಡಿಯಾ ಟೂರ್ ನ ಎರಡನೇ ಹಂತದಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರೊಂದಿಗೆ ಫುಟ್ಬಾಲ್ ಐಕಾನ್ ಲಿಯೋನೆಲ್ ಮೆಸ್ಸಿ ಫುಟ್ ಬಾಲ್ ಆಡಿದ್ದಾರೆ.
ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ 9s ಮತ್ತು ಅಪರ್ಣ ಆಲ್-ಸ್ಟಾರ್ಸ್ ನಡುವಿನ ಸೌಹಾರ್ದ ಪಂದ್ಯದೊಂದಿಗೆ ಹೈದರಾಬಾದ್ನ GOAT India Tour ಕಾರ್ಯಕ್ರಮ ಶುರುವಾಯಿತು.
ಪಂದ್ಯದ ಬಳಿಕ ರೇವಂತ್ ರೆಡ್ಡಿ ಅವರ ಸಮ್ಮುಖದಲ್ಲಿ ಮೆಸ್ಸಿ ತನ್ನ ಫುಟ್ಬಾಲ್ ಜೆರ್ಸಿಯನ್ನ ರಾಹುಲ್ ಗಾಂಧಿ ಅವರಿಗೆ ಉಡುಗೊರೆಯಾಗಿ ಕೊಟ್ಟರು. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆರಂಭವಾಗುವುದಕ್ಕೆ ಮುನ್ನ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಮೆಸ್ಸಿ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದರು.





