ಬೂತ್ ಮಟ್ಟದ ಅಧಿಕಾರಿ ನೇಣು ಬಿಗಿದು ಆತ್ಮಹತ್ಯೆ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬೂತ್ ಮಟ್ಟದ ಅಧಿಕಾರಿಯೊಬ್ಬರು ಕೆಲಸದ ಒತ್ತಡದಿಂದ ನೇಣಿಗೆ ಶರಣಾಗಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಯಿಂದ ಅವರು ತೀವ್ರ ಒತ್ತಡಕ್ಕೊಳಗಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ನೇಣಿಗೆ ಶರಣಾದ ಮಹಿಳೆಯನ್ನು ಪಶ್ಚಿಮ ಬಂಗಾಳದ ನಾಡಿಯಾ ನಿವಾಸಿ ರಿಂಕು ತರಫ್ದಾರ್ (54) ಎಂದು ಗುರುತಿಸಲಾಗಿದೆ. ಕೃಷ್ಣನಗರದ ನಿವಾಸದ ರೂಮ್‌ನಲ್ಲಿ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಬಂಗಾಳಿ ಸ್ವಾಮಿ ವಿವೇಕಾನಂದ ಶಾಲೆಯ ಶಿಕ್ಷಕಿಯಾಗಿ ಕಾರ್ಯನಿರ್ಮಹಿಸುತ್ತಿದ್ದರು.
ಅವರು ಆತ್ಮಹತ್ಯೆಗೆ ಶರಣಾದ ರೂಮ್‌ನಲ್ಲಿ ಡೆತ್‌ನೋಟ್ ಪತ್ತೆಯಾಗಿದೆ. ಅದರಲ್ಲಿ ʻನನಗೆ ಬಿಎಲ್‌ಒ ಕೆಲಸ ನಿಭಾಯಿಸಲು ಸಾಧ್ಯವಾಗದಿದ್ದರೆ, ಆಡಳಿತಾತ್ಮಕ ಒತ್ತಡ ಬರುತ್ತದೆ. ಅದನ್ನು ನನಗೆ ತಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.




