May 3, 2026

ಬಂಟ್ವಾಳ: ಬೈಕ್ ಸ್ಕಿಡ್ ಆಗಿ ಬಿದ್ದು ಕಾರ್ಮಿಕ ಸಾವು

0
image_editor_output_image297766804-1763817108007.jpg

ಬಂಟ್ವಾಳ: ಬೈಕ್ ಸ್ಕಿಡ್ ಆಗಿ ಡಾಮರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಹೋಟೆಲ್ ಕಾರ್ಮಿಕನೋರ್ವನೋರ್ವ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಬಿಸಿರೋಡಿನಲ್ಲಿ ನಡೆದಿದೆ.

ಬಾಳ್ತಿಲ ಗ್ರಾಮದ ಚೆಂಡೆ ನೀರಪಾದೆ ನಿವಾಸಿ ಯಶವಂತ ಯಾನೆ ಚೇತನ್ (35) ಮೃತಪಟ್ಟ ವ್ಯಕ್ತಿ. ಚೇತನ್ ಅವರು ಮನೆಯಿಂದ ಬಿಸಿರೋಡಿಗೆ ಬರುವ ವೇಳೆ ಸಣ್ಣಕುಕ್ಕು ಎಂಬಲ್ಲಿ ಅಪಘಾತ ಸಂಭವಿಸಿದೆ. ಚೇತನ್ ಅವರು ಬಿಸಿರೋಡಿನ ಸೋಮಯಾಜಿ ಹೌಸ್ ನಲ್ಲಿರುವ ಹೋಟೆಲ್ ಕೃಷ್ಣ ವಿಲಾಸದಲ್ಲಿ ಸಪ್ಲಾಯರ್ ಕೆಲಸ ಮಾಡುತ್ತಿದ್ದ.

ಅಯ್ಯಪ್ಪ ಮಾಲಾಧಾರಿಯಾಗಿ ಶಬರಿಮಲೆ ಯಾತ್ರೆಗೆ ಹೋಗಿ ನ.19 ರಂದು ಮನೆಗೆ ಬಂದಿದ್ದರು. ಹಾಗಾಗಿ ರಜೆಯಲ್ಲಿದ್ದ ಇವರು ಸಂಬಂಧಿಕರ ಮನೆಗೆ ಹೋಗಿ ಶಬರಿಮಲೆ ದೇವಸ್ಥಾನದಿಂದ ತಂದ ಪ್ರಸಾದ ವಿತರಿಸಿ, ಬಳಿಕ ಮನೆಗೆ ಪದಾರ್ಥಕ್ಕೆ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿದ್ದರು.

Leave a Reply

Your email address will not be published. Required fields are marked *

error: Content is protected !!