ವಿಟ್ಲ: ಕೇಂದ್ರ ಜುಮಾ ಮಸೀದಿಯಲ್ಲಿ ಮಾಡನ್ನೂರು ದಶಮಾನೋತ್ಸವದ ಪೋಸ್ಟರ್ ಪ್ರದರ್ಶನ
ವಿಟ್ಲ: ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಸೆಂಟರ್ ನಲ್ಲಿ ಇದೇ ಡಿಸೆಂಬರ್ 5 ರಿಂದ 7 ರ ವರೆಗೆ ನಡೆಯುವ ದಶಮಾನೋತ್ಸವ ಸಮ್ಮೇಳನದ ಪ್ರಚಾರಾರ್ಥವಾಗಿ ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಪೋಸ್ಟರ್ ಪ್ರದರ್ಶನ ಮಾಡಲಾಯಿತು.
ಈ ಸಂದರ್ಭ ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು, ಖತೀಬ್ ಆರಿಫ್ ಬಾಖವಿ, ಕೋಶಾಧಿಕಾರಿ ಶರೀಫ್ ಪೊನ್ನೋಟು, ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ, ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಹೊರೈಝನ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಅಝೀಝ್ ಸನ, ಝುಬೈರ್ ಮಾಸ್ಟರ್, ಇಕ್ಬಾಲ್ ಶೀತಲ್, ಶಮೀರ್ ಪಳಿಕೆ, ಮೊಯ್ದೀನ್ ಹಾಜಿ ಕೂಜಪ್ಪಾಡಿ, ಬಿ.ಎಂ.ಅಬ್ದುಲ್ ಖಾದರ್, ಅಬೂಬಕರ್ ಮದನಿ ಮುಂತಾದವರು ಉಪಸ್ಥಿತರಿದ್ದರು.





