ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿ ಮದುವೆಯಾಗಿ ಪೊಲೀಸ್ ಠಾಣೆಗೆ ಹಾಜರು
ಇಂದೋರ್: ವಾರದಿಂದ ನಾಪತ್ತೆಯಾಗಿರುವ ಕಾಲೇಜು ವಿದ್ಯಾರ್ಥಿನಿ ಎಲೆಕ್ಟ್ರಿಷಿಯನ್ನ ಮದುವೆಯಾಗಿ ಹಿಂದಿರುಗಿರುವ ಘಟನೆ ಇಂದೋರ್ನಲ್ಲಿ ನಡೆದಿದೆ. ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿನಿ ಏಳು ದಿನಗಳ ನಂತರ ಹಿಂತಿರುಗಿದ್ದು, ರತ್ಲಂಗೆ ಹೋಗುವ ರೈಲಿನಲ್ಲಿ ಭೇಟಿಯಾಗಿದ್ದ ಎಲೆಕ್ಟ್ರಿಷಿಯನ್‌ನನ್ನು ಮದುವೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
ವಿದ್ಯಾರ್ಥಿನಿ ಶ್ರದ್ಧಾ ತನ್ನ ಗೆಳೆಯ ಸಾರ್ಥಕ್ ಜೊತೆ ಓಡಿಹೋಗಲು ಯೋಜಿಸಿದ್ದಾಗಿ ಬಹಿರಂಗಪಡಿಸಿದಳು. ಆದರೆ, ಸಾರ್ಥಕ್ ರೈಲ್ವೆ ನಿಲ್ದಾಣಕ್ಕೆ ಬಾರದಿದ್ದಾಗ, ಅವಳು ರತ್ಲಂಗೆ ರೈಲು ಹತ್ತಿದ್ದಳು. ಅಲ್ಲಿ ಅವಳು ಎಲೆಕ್ಟ್ರಿಷಿಯನ್ನ ಭೇಟಿಯಾಗಿ ಆತನನ್ನು ಮದುವೆಯಾಗಿರುವುದಾಗಿ ಹೇಳಿದ್ದಾರೆ.
ಕರಣ್‌ದೀಪ್ ಇಂದೋರ್‌ನ ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದಾನೆ.ಕರಣ್‌ದೀಪ್ ಹಾಗೂ ತಾನು ಒಂದೇ ರೈಲಿನಲ್ಲಿ ಪ್ರಯಾಣಿಸುತ್ತಿರುವುದನ್ನು ನೋಡಿ ಆಶ್ಚರ್ಯವಾಯಿತು ಎಂದು ಶ್ರದ್ಧಾ ಹೇಳಿದ್ದಾಳೆ.ಮತ್ತು ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಮೊದಲು ಅವರು ಮಂದ್ಸೌರ್‌ಗೆ ಹೋಗಿ ನಂತರ ಸುಮಾರು 250 ಕಿಲೋಮೀಟರ್ ದೂರದಲ್ಲಿರುವ ಮಹೇಶ್ವರಕ್ಕೆ ಹೋಗಿ, ಅಲ್ಲಿ ದೇವಸ್ಥಾನದಲ್ಲಿ ವಿವಾಹವಾದರು. ಬಳಿಕ ಅವರು ನೇರವಾಗಿ ಇಂದೋರ್ ಪೊಲೀಸ್ ಠಾಣೆಗೆ ಮರಳಿದರು.




