December 15, 2025

150 ಪ್ರಯಾಣಿಕರಿದ್ದ ದೋಣಿ ಮುಳುಗಿ 68 ಮಂದಿ ಸಾವು

0
image_editor_output_image-553306296-1754297074379.jpg

ಕೈರೊ: 150 ಪ್ರಯಾಣಿಕರಿದ್ದ ದೋಣಿ ಮುಳುಗಿ 68 ಮಂದಿ ಸಾವನ್ನಪ್ಪಿರುವ ಘಟನೆ ಯೆಮೆನ್‌ನಲ್ಲಿ ನಡೆದಿದೆ.

ಹೌದು, ಯೆಮೆನ್‌ನ ದಕ್ಷಿಣ ಅಭ್ಯಾನ್ ಪ್ರಾಂತ್ಯದ ಕರಾವಳಿ ಪ್ರದೇಶದಲ್ಲಿ ದುರಂತ ಸಂಭವಿಸಿದೆ. ಈವರೆಗೆ 10 ಮಂದಿಯನ್ನು ರಕ್ಷಿಸಲಾಗಿದೆ.

ಕಡುಬಡತನದ ಆಫ್ರಿಕಾದಿಂದ ಪಲಾಯನಗೈದ ನೂರಾರು ವಲಸಿಗರು ಕೆಲಸದ ನಿಟ್ಟಿನಲ್ಲಿ ಶ್ರೀಮಂತ ಗಲ್ಫ್ ಅರಬ್ ರಾಷ್ಟ್ರಗಳನ್ನು ತಲುಪುವ ಇರಾದೆ ಹೊಂದಿದ್ದರು. ಯೆಮೆನ್‌ಗೆ ಅನಧಿಕೃತ ವಲಸಿಗರ ಹರಿವು ಗಣನೀಯವಾಗಿ ಹೆಚ್ಚುತ್ತಿದೆ ಎಂದು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ವಲಸೆ ಸಂಘಟನೆ (ಐಒಎಂ) ಹೇಳಿದೆ.

Leave a Reply

Your email address will not be published. Required fields are marked *

You may have missed

error: Content is protected !!