ರೈಲು ಹಳಿಯ ಮೇಲೆ ಕಾರನ್ನು ಚಲಾಯಿಸಿದ ಮಹಿಳೆ: ರೈಲು ಸೇವೆಗಳು ಸ್ಥಗಿತ
ತೆಲಂಗಾಣ: ರಂಗಾರೆಡ್ಡಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ರೈಲ್ವೆ ಹಳಿಯ ಮೇಲೆ ಕಾರನ್ನು ಚಲಾಯಿಸಿದ್ದು, ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಘಟನೆ ಶಂಕರಪಲ್ಲಿ ಬಳಿ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ. ವೀಡಿಯೊದಲ್ಲಿ ಕಾರನ್ನು ರೈಲ್ವೆ ಹಳಿಗಳ ಉದ್ದಕ್ಕೂ ಓಡಿಸುವುದನ್ನು ತೋರಿಸಲಾಗಿದೆ.
ರೈಲ್ವೆಯ ಸುರಕ್ಷತಾ ಪ್ರೋಟೋಕಾಲ್ ಸ್ಪಷ್ಟವಾದ ಉಲ್ಲಂಘನೆಯಾಗಿದ್ದು, ಕಾರಿನ ನೋಂದಣಿ ಸಂಖ್ಯೆಯ ಆಧಾರದ ಮೇಲೆ ರೈಲ್ವೆ ಅಧಿಕಾರಿಗಳು ಆಕೆಯ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ. ಮಹಿಳೆ ವೇಗವಾಗಿ ಕಾರನ್ನು ರೈಲ್ವೆ ಹಳಿಯ ಮೇಲೆ ಚಲಾಯಿಸುತ್ತಿರುವ ಸಂದರ್ಭದಲ್ಲಿ ಯಾವುದೇ ರೈಲು ಬಾರದೇ ಇದ್ದರಿಂದ ಯಾವುದೇ ಅಪಘಢ ಸಂಭವಿಸಿಲ್ಲ. ರೈಲ್ವೆ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಅದೇ ಮಾರ್ಗವಾಗಿ ತೆರಳುತ್ತಿರುವ ರೈಲುಗಳನ್ನು ಸ್ಥಗಿತಗೊಳಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ವರಿಯಾಗಿದೆ.
ಆ ವಾಹನವನ್ನು ಮಹಿಳೆಯೊಬ್ಬರು ಚಲಾಯಿಸುತ್ತಿದ್ದರು, ರೈಲ್ವೆ ಸಿಬ್ಬಂದಿ ಹಲವಾರು ಸಿಗ್ನಲ್‌ಗಳನ್ನು ನೀಡಿದ್ದರೂ ಅವರು ನಿಲ್ಲಿಸಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು-ಹೈದರಾಬಾದ್ ರೈಲು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ನಂತರ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದರು. ಅಧಿಕಾರಿಗಳು ನಿಯಮ ಉಲ್ಲಂಘನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.





