ಸಜಿಪಮುನ್ನೂರು: ಸಮಸ್ತ ಸ್ಥಾಪಕ ದಿನಾಚರಣೆ:
ಹಯಾತುಲ್ ಇಸ್ಲಾಂ ಮದ್ರಸ ಮಲಾಯಿಬೆಟ್ಟು ಸಜಿಪಮುನ್ನೂರು ಇದರ ವತಿಯಿಂದ ಸಮಸ್ತ ಸ್ಥಾಪನಾ ದಿನದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಖತೀಬ್ ಉಮರ್ ಶಾಫಿ ದಾರಿಮಿ ದುವಾ ಮಾಡಿ ಸಮಸ್ತ ದ ಕುರಿತು ವಿಷಯ ಮಂಡನೆ ನಡೆಸಿದರು.
ಜಮಾತ್ ಅಧ್ಯಕ್ಷ ಇಬ್ರಾಹಿಂ ಮುನ್ನೂರು ಹಾಗೂ ಮದ್ರಸ ಉಸ್ತುವಾರಿ ಯೂಸುಫ್ ಕರಂದಾಡಿ ಧ್ವಜಾರೋಹಣ ನೆರವೇರಿಸಿದರು.
ಕಾರ್ಯದರ್ಶಿ ಮಹಮ್ಮದ್ ಶರೀಫ್ ,ಅಬ್ದುಲ್ ಕರೀಂ ತನ್ನಚಿಲ್ ಮದ್ರಸ ಮಕ್ಕಳು ಹಾಗೂ ಪೋಷಕರು ಭಾಗವಹಿಸಿದರು.
ಸದರ್ ಮುಅಲ್ಲಿಂ ಇಬ್ರಾಹಿಂ ಝೈನಿ ಸ್ವಾಗತಿಸಿ ಶಿಕ್ಷಕ ಶಂಸುದ್ದಿನ್ ಝೈನಿ ವಂದಿಸಿದರು.
ಮದ್ರಸ ವಿದ್ಯಾರ್ಥಿಗಳ ಕ್ವಿಝ್ ಕಾರ್ಯಕ್ರಮದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಸಿಹಿ ತಿಂಡಿ ವಿತರಣೆ ಮಾಡಲಾಯಿತು.





