ಕೊಡಂಗಾಯಿ: ಸಮಸ್ತ ಸ್ಥಾಪಕ ದಿನ : ಮುಸ್ಲಿಂ ಸಮಾಜಕ್ಕೆ ಸಮಸ್ತ ಕೊಡುಗೆ ಅಪಾರ
ವಿಟ್ಲ:ದಾರುನ್ನಾಜಾತ್ ಎಜುಕೇಶನ್ ಸೆಂಟರ್ ಟಿಪ್ಪು ನಗರ ವಿದ್ಯಾಸಂಸ್ಥೆಯಲ್ಲಿ ಸಮಸ್ತ 100 ವರ್ಷ ಪೂರ್ತಿಗೊಳಿಸಿದ ಶುಭ ಸಂದರ್ಭದಲ್ಲಿ ಸಮಸ್ತ ಸ್ಥಾಪನೆ ದಿನ ಬಹು ಅಸಯ್ಯದ್ ಶಮೀಮ್ ತಂಙಳ್ ಧ್ವಜಾರೋಹಣ ನಡೆಸಿ ಸಮಸ್ತಕ್ಕಾಗಿ ನಾಯಕತ್ವ ನೀಡಿದ ಮಹಾನುಭಾವರನ್ನು ಸ್ಮರಿಸಿ ಪ್ರಾರ್ಥನೆ ಸಲ್ಲಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಮ್ಯಾನೇಜರ್ SMA ರಾಜ್ಯ ಉಪಾಧ್ಯಕ್ಷರು ಆದ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ಮಾತನಾಡಿ ಸಮಸ್ತ ಉಲೆಮಾಗಳು ಮುಸ್ಲಿಂ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ ಇಸ್ಲಾಮಿನ ಆಚಾರವನ್ನು ಮುಸ್ಲಿಂ ಸಮಾಜಕ್ಕೆ ಪಸರಿಸಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡುವುದರಲ್ಲಿ ಉಲೆಮಗಳ ಪಾತ್ರ ಬಹುದೊಡ್ಡದು ಎಂದು ನುಡಿದರು.
ಈ ಕಾರ್ಯಕ್ರಮದಲ್ಲಿ
ಅಲ್ ಮದ್ರಸತ್ತುನ್ನವವಿಯ್ಯಾ ಟಿಪ್ಪು ನಗರ ಸದ್ರ್ ಉಸ್ತಾದರಾದ ಶಿಹಾಬುದ್ದೀನ್ ಸಖಾಫಿ ಸ್ವಾಗತ ಭಾಷಣ ನಡೆಸಿದರು.
ಅದೇ ಸಂದರ್ಭದಲ್ಲಿ ಅಬ್ಬಾಸ್ ಟಿಪ್ಪು ನಗರ ಅಬೂಬಕ್ಕರ್ ಟಿಪ್ಪು ನಗರ ನಜೀರ್ ಟಿಪ್ಪು ನಗರ ದರ್ಸ್ ವಿದ್ಯಾರ್ಥಿಗಳು ಮತ್ತು ಎಸ್ ಬಿ ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಮುಹಲ್ಲಿಮರಾದ ಹಾಫಿಳ್ ಶರೀಫ್ ಮುಸ್ಲಿಯರ್ ಕೊನೆಗೆ ಎಲ್ಲರಿಗೂ ಧನ್ಯವಾದ ಹೇಳಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.





