ಶಿವಮೊಗ್ಗ: ಆಸ್ಪತ್ರೆ ಆವರಣದಲ್ಲಿ ಅಪಘಾತದಲ್ಲಿ ವಿದ್ಯಾರ್ಥಿನಿ ಮೃತ್ಯು
ಶಿವಮೊಗ್ಗ: ಇಲ್ಲಿನ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ನೀರಿನ ಟ್ಯಾಂಕರ್ ಹಾಗೂ ಜುಪಿಟರ್ ಸ್ಕೂಟಿ ನಡುವೆ ಢಿಕ್ಕಿಯಾಗಿ ಪಿಡಿಯಾಟ್ರಿಕ್ ಪಿ.ಜಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಗುರುವಾರ (ಮಾ.12) ನಡೆದಿದೆ. ಘಟನೆಯಲ್ಲಿ ಮತ್ತೋರ್ವರಿಗೆ ಗಾಯವಾಗಿದೆ.
ಉಡುಪಿಯ ಕಾರ್ಕಳ ತಾಲೂಕಿನ ಬೋಳ ಗ್ರಾಮದ ಲಾವಣ್ಯ (25) ಮೃತರು. ಸತೀಶ್- ಸುನೀತಾ ಎಂಬುವರ ಪುತ್ರಿ ಲಾವಣ್ಯ ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಮೊದಲ ವರ್ಷದ ಪಿಡಿಯಾಟ್ರಿಕ್ ಪಿಜಿ ಓದುತ್ತಿದ್ದರು.
ಅಪಘಾತದಲ್ಲಿ ಓವೇರಿಯಾ ಎಂಬ ವಿದ್ಯಾರ್ಥಿನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಂಗಳೂರಿನ ಜೆಪಿ ನಗರದ ಓವೇರಿಯಾ ಅಂತಿಮ ವರ್ಷದ ಎಂಡಿ ಓದುತ್ತಿದ್ದರು. ಇಬ್ಬರು ಆಸ್ಪತ್ರೆಯಿಂದ ಹಾಸ್ಟೆಲ್ ಗೆ ಹೋಗುವಾಗ ನಡೆದ ದುರ್ಘಟನೆ ನಡೆದಿದೆ.




