ವಿಧಾನಸಭೆ ಸ್ಪೀಕರ್ ಆಗಿ ಜಿ.ಎಸ್ ಪಾಟೀಲ್, ಉಪ ಸಭಾಧ್ಯಕ್ಷರಾಗಿ ಎಸ್ ಪೊನ್ನಣ್ಣ ಆಯ್ಕೆ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರಿ ಚಟುವಟಿಕೆಗಳು ಗರಿಗೆದರಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟಕ್ಕೆ ಇದೀಗ ನೂತನವಾಗಿ 20 ಮಂದಿ ಶಾಸಕರು ಸಚಿವರಾಗಿ ಸೇರ್ಪಡೆಗೊಳ್ಳುತ್ತಿದ್ದಾರೆ. ಇಂದು ಸಂಜೆ ನಡೆದ ವಿಶೇಷ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಜಭವನದಲ್ಲಿ ಪ್ರಮಾಣ ವಚನ ಬೋಧಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಪ್ರಮುಖ ರಾಜಕೀಯ ಬೆಳವಣಿಗೆಗಳ ನಡುವೆಯೇ, ರಾಜ್ಯ ಶಾಸಕಾಂಗದ ಪ್ರಮುಖ ಹುದ್ದೆಗಳಿಗೂ ಹೊಸ ಸಾರಥಿಗಳನ್ನು ಆಯ್ಕೆ ಮಾಡಲಾಗಿದೆ. ವಿಧಾನಸಭೆಯ ನೂತನ ಸ್ಪೀಕರ್ ಆಗಿ ಹಿರಿಯ ನಾಯಕ ಜಿ.ಎಸ್. ಪಾಟೀಲ್ ಅವರು ಆಯ್ಕೆಯಾಗಿದ್ದರೆ, ಉಪ ಸಭಾಧ್ಯಕ್ಷರಾಗಿ ಎಸ್. ಪೊನ್ನಣ್ಣ ಅವರನ್ನು ನೇಮಕ ಮಾಡಲಾಗಿದೆ.
ವಿಧಾನಪರಿಷತ್ತಿನಲ್ಲೂ ಪ್ರಮುಖ ಬದಲಾವಣೆಗಳು ನಡೆದಿದ್ದು, ನೂತನ ಸಭಾಪತಿಯಾಗಿ ಸಲೀಂ ಅಹಮದ್ ಹಾಗೂ ಉಪಸಭಾಪತಿಯಾಗಿ ಹಿರಿಯ ನಾಯಕಿ ಉಮಾಶ್ರೀ ಅವರು ಆಯ್ಕೆಯಾಗಿದ್ದಾರೆ.




