September 22, 2026

11 ರಾಜ್ಯಸಭಾ ಸ್ಥಾನಗಳಿಗೆ ಅ.16ರಂದು ಚುನಾವಣೆ

0
image_editor_output_image445115881-1790062064416

ನವದೆಹಲಿ: ಉತ್ತರ ಪ್ರದೇಶದ 10 ಮತ್ತು ಉತ್ತರಾಖಂಡದ 1 ಸ್ಥಾನ ಸೇರಿದಂತೆ ಒಟ್ಟು 11 ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ಹಾಗೂ ಪಶ್ಚಿಮ ಬಂಗಾಳದ ಒಂದು ಸ್ಥಾನಕ್ಕೆ ಉಪಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ECI) ಮಂಗಳವಾರ ಅಧಿಕೃತವಾಗಿ ಪ್ರಕಟಿಸಿದೆ.

ನವೆಂಬರ್‌ನಲ್ಲಿ ಹಾಲಿ ಸದಸ್ಯರ ಆರು ವರ್ಷಗಳ ಅವಧಿ ಮುಕ್ತಾಯಗೊಳ್ಳಲಿದ್ದು, ಅಕ್ಟೋಬರ್ 16ರಂದು ಮತದಾನ ಹಾಗೂ ಅದೇ ದಿನ ಸಂಜೆ ಮತ ಎಣಿಕೆ ನಡೆಯಲಿದೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಸಮಾಜವಾದಿ ಪಕ್ಷದ ಹಿರಿಯ ಮುಖಂಡ ರಾಮ್ ಗೋಪಾಲ್ ಯಾದವ್ ಹಾಗೂ ದಿನೇಶ್ ಶರ್ಮಾ ಸೇರಿದಂತೆ ಪ್ರಮುಖರ ಅಧಿಕಾರಾವಧಿ ಮುಕ್ತಾಯವಾಗುತ್ತಿದೆ. ಸೆಪ್ಟೆಂಬರ್ 29, 2026ರಂದು ಅಧಿಸೂಚನೆ ಪ್ರಕಟಗೊಳ್ಳಲಿದೆ, ಅಕ್ಟೋಬರ್ 6 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುತ್ತದೆ. ಅಕ್ಟೋಬರ್ 7 ನಾಮ ಪತ್ರ ಪರಿಶೀಲನೆಗೆ ಕೊನೆಯ ದಿನ, ಉಮೇದುವಾರಿಕೆ ಹಿಂಪಡೆಯಲು ಅಕ್ಟೋಬರ್ 9 ಕೊನೆ ದಿನವಾಗಿರುತ್ತದೆ. ಅಕ್ಟೋಬರ್ 16ರ ಸಂಜೆ 5 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.

 

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಉತ್ತರ ಪ್ರದೇಶದ ಮಾಜಿ ಡಿಸಿಎಂ ದಿನೇಶ್ ಶರ್ಮಾ, ಸಮಾಜವಾದಿ ಪಕ್ಷದ ಪ್ರಮುಖ ಮುಖಂಡ ಪ್ರೊ. ರಾಮ್ ಗೋಪಾಲ್ ಯಾದವ್ ಹಾಗೂ ಬಹುಜನ ಸಮಾಜ ಪಕ್ಷದ ರಾಮ್‌ಜಿ ಗೌತಮ್ ಸೇರಿದಂತೆ ಪ್ರಮುಖ ಸಂಸದರ ಅಧಿಕಾರಾವಧಿ ನವೆಂಬರ್‌ನಲ್ಲಿ ಕೊನೆಗೊಳ್ಳಲಿದೆ. ಉತ್ತರಾಖಂಡದಿಂದ ಬಿಜೆಪಿಯ ನರೇಶ್ ಬನ್ಸಾಲ್ ಹಾಗೂ ರಾಜೀನಾಮೆಯಿಂದ ತೆರವಾದ ಪಶ್ಚಿಮ ಬಂಗಾಳದ ಒಂದು ಸ್ಥಾನಕ್ಕೂ ಇದೇ ವೇಳೆ ಚುನಾವಣೆ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!