ಸೇತುವೆ ತಡೆಗೋಡೆಗೆ ಕಾರು ಢಿಕ್ಕಿ: ಇಂಡಿಗೋ ಸಿಬ್ಬಂದಿ ಸಾವು
ಮುಂಬೈ: ಸೇತುವೆಯ ತಡೆಗೋಡೆಗೆ ಕ್ಯಾಬ್ ಡಿಕ್ಕಿಯಾಗಿ ಅದರಲ್ಲಿದ್ದ ಇಂಡಿಗೋ ಕ್ಯಾಬಿನ್ ಸಿಬ್ಬಂದಿ ಸಾವನ್ನಪ್ಪಿದ ಘಟನೆ ಮುಂಬೈನಲ್ಲಿ ನಡೆದಿದೆ.
ಕೈನೂರ್ ಮಿಸ್ತ್ರಿ (32) ಸಾವನ್ನಪ್ಪಿದ ದುರ್ದೈವಿ. ಸೆ.18 ರಂದು ಕೆಲಸ ಮುಗಿಸಿ ಕಂಪನಿ ಒದಗಿಸಿದ್ದ ಕ್ಯಾಬ್‌ನಲ್ಲಿ ಅವರು ಮನೆಗೆ ಮರಳುತ್ತಿದ್ದರು.
ಆಗ ಕಾರು ಬೊರಿವಲಿ ಪೂರ್ವದ ವೆಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿರುವ ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿತ್ತು. ಈ ಅಪಘಾತದಲ್ಲಿ ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ಮಿಸ್ತ್ರಿ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.




