ಇಬ್ಬರು ಮಕ್ಕಳು ಸಹಿತ ನಾಲ್ವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಕೇರಳ: ಮನೆಯಲ್ಲಿ ನಾಲ್ವರು ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕೇರಳದ ಇಡುಕ್ಕಿಯಲ್ಲಿ ನಡೆದಿದೆ.
ಮನೆಯ ಲಿವಿಂಗ್ ರೂಂನಲ್ಲಿ 4 ಶವಗಳು ಪತ್ತೆಯಾಗಿವೆ. ಸಜೀವ್ ಮೋಹನನ್(34), ಪತ್ನಿ ರೇಷ್ಮಾ(30), 6 ವರ್ಷದ ಮಗ ದೇವನ್ ಹಾಗೂ 4 ವರ್ಷದ ಮಗಳು ದಿಯಾ ಮೃತಪಟ್ಟವರು.
ಸಜೀವ್ ಆಟೋ ಖರೀದಿಸುವ ಸಲುವಾಗಿ ಖಾಸಗಿ ಹಣಕಾಸು ಸಂಸ್ಥೆಯಿಂದ 3 ಲಕ್ಷ ಸಾಲ ಪಡೆದಿದ್ದರು. ಬಳಿಕ ಅವರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿತ್ತು ಎಂದು ಹೇಳಲಾಗಿದೆ. ಮೊದಲ ಏಳು ತಿಂಗಳು ನಿಯಮಿತವಾಗಿ ಸಾಲದ ಕಂತು ಕಟ್ಟುತ್ತಿದ್ದರು. ಆ ಬಳಿಕ ಆರ್ಥಿಕ ಮುಗ್ಗಟ್ಟಿನಿಂದ ಸಮಸ್ಯೆಯಾಗಿತ್ತು ಎಂದು ಹೇಳಲಾಗಿದೆ.