February 26, 2026

ಯೂಟ್ಯೂಬರ್, ವಿದ್ಯಾರ್ಥಿನಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

0
image_editor_output_image964125453-1772108045910.jpg

ಹೈದರಾಬಾದ್: 21 ವರ್ಷದ ಯೂಟ್ಯೂಬರ್ ಮತ್ತು ವಿಜ್ಞಾನ ವಿದ್ಯಾರ್ಥಿನಿ ಬಾನು ಕೋಮಾಲಿ ಸೋಮವಾರ ತೆಲಂಗಾಣದ ಹೈದರಾಬಾದ್ನಲ್ಲಿರುವ ತನ್ನ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಆಕೆ ತನ್ನ ತಾಯಿಗೆ “ಐ ಲವ್ ಯು ಸೋ ಮಚ್” ಎಂದು ಸಂದೇಶ ಕಳುಹಿಸಿದ ಸ್ವಲ್ಪ ಸಮಯದಲ್ಲೇ ನೇಣಿಗೆ ಶರಣಾಗಿದ್ದಾಳೆ ಎಂದು ವರದಿಯಾಗಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂ ನಿವಾಸಿ ಕೋಮಲಿ, ಹೈದರಾಬಾದ್ ನ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದಾರೆ. ಸುಮಾರು 11 ತಿಂಗಳುಗಳಿಂದ ಅಪಾರ್ಟ್ಮೆಂಟ್ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದು. ಯುಟ್ಯೂಬ್ ನಲ್ಲಿ ತನ್ನ ಜೀವನ ಮತ್ತು ದೈನಂದಿನ ದಿನಚರಿಗಳ ಕುರಿತಂತೆ ವಿಡಿಯೋ ಮಾಡುತ್ತಿದ್ದರು.

ಪೊಲೀಸರ ಪ್ರಕಾರ, ಸೋಮವಾರ ಮುಂಜಾನೆ ಕೋಮಾಲಿ ಕುವೈಟ್ ನಲ್ಲಿರುವ ತನ್ನ ತಾಯಿ ಬಿ. ಸತ್ಯ ವರಲಕ್ಷ್ಮಿಗೆ “ಐ ಲವ್ ಯು ಮಮ್ಮಿ” ಎಂದು ಸಂದೇಶ ಕಳುಹಿಸಿದ್ದಾಳೆ. ಬಳಿಕ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ಪದೇ ಪದೇ ಕರೆಗಳು ಉತ್ತರಿಸದೇ ಹೋದಾಗ, ಆಕೆಯ ತಾಯಿ ಕೋಮಾಲಿ ಸ್ನೇಹಿತರಿಗೆ ಮಾಹಿತಿ ತಿಳಿಸಿ ಪ್ಲ್ಯಾಟ್ ಗೆ ತೆರಳಲು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!