March 4, 2026

ಫರಂಗಿಪೇಟೆ: ನೇತ್ರಾವತಿ ನದಿಯಲ್ಲಿ ರಾಶಿ ರಾಶಿ ಆಧಾ‌ರ್ ಕಾರ್ಡ್ ಪತ್ತೆ

0
image_editor_output_image171877184-1772624695872.jpg

ಫರಂಗಿಪೇಟೆ: ರಾಶಿ ರಾಶಿ ಆಧಾ‌ರ್ ಕಾರ್ಡ್ ಪುದು ಗ್ರಾಮದ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿವೆ. ಈ ಘಟನೆಯು ಹಲವು ಅನುಮಾನಕ್ಕೆ ಕಾರಣವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಈ ಬಗ್ಗೆ ಖಾಸಗಿ ಸುದ್ದಿ ವಾಹಿನಿಯ ಜೊತೆ ಮಾತನಾಡಿದ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ನಿನ್ನೆ ಸಂಜೆ ನದಿಯಲ್ಲಿ ಆಧಾರ್ ಕಾರ್ಡ್ ಇದೆ ಎನ್ನುವ ಬಗ್ಗೆ ನನಗೆ ಕರೆ ಬಂದಿದೆ. ನಾವೆಲ್ಲರೂ ನದಿಯಲ್ಲಿ ಹೋಗಿ ನೋಡುವಾಗ ಆಧಾರ್ ಕಾರ್ಡ್‌ ಬಂಡಲ್ ಸಿಕ್ಕಿದೆ. ಬಳಿಕ ಇತರರ ಸಹಾಯದೊಂದಿಗೆ ಅದನ್ನು ಮೇಲೆ ಎತ್ತಿದ್ದೇವೆ, ಇದು ಅಂಚೆ ಕಚೇರಿಯ ನಿರ್ಲಕ್ಷ್ಯ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಅಲ್ಲದೆ ಈ ಬಗ್ಗೆ ಶಾಸಕ, ಸ್ಪೀಕರ್ ಯು.ಟಿ ಖಾದ‌ರ್ ಅವರಿಗೆ ಮಾಹಿತಿ ನೀಡಿದ್ದೇವೆ. ಅವರು ಕೂಡ ಈ ಕುರಿತು ತನಿಖೆಯಾಗಬೇಕು ಎಂದು ಹೇಳಿದ್ದಾರೆ. ಬಂಟ್ವಾಳ ತಹಶೀಲ್ದಾರ್ ಅವರಿಗೂ ದೂರು ಕೊಟ್ಟಿದ್ದೇವೆ ಎಂದರು.

Leave a Reply

Your email address will not be published. Required fields are marked *

error: Content is protected !!