February 26, 2026

ನಿಂತಿದ್ದ ಲಾರಿಗೆ ಹಿಂಬದಿಯಿಂದ ಮೀನು ಸಾಗಾಟದ ಲಾರಿ ಢಿಕ್ಕಿ: ಬೋಳಿಯಾರ್ ನಿವಾಸಿ ರಿಝ್ವಾನ್ ಮೃತ್ಯು

0
image_editor_output_image2048269443-1771976095365.jpg

ಮಹಾರಾಷ್ಟ್ರ: ನಿಂತಿದ್ದ ಲಾರಿಗೆ ಹಿಂಬದಿಯಿಂದ ಮೀನು ಸಾಗಾಟದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೀನು ಸಾಗಾಟ ಲಾರಿ ಚಾಲಕ ಸ್ಥಳದಲ್ಲೇ ಸಾವನಪ್ಪಿದ ಘಟನೆ ಮುಂಬೈ-ಗೋವಾ ಹೆದ್ದಾರಿಯ ರತ್ನಗಿರಿ ಎಂಬಲ್ಲಿ ಸಂಭವಿಸಿದೆ.

ಮೃತರನ್ನು ಬೋಳಿಯಾರ್ ನಿವಾಸಿ ಬಿಎಚ್ ಕರೀಂ ಎಂಬವರ ಪುತ್ರ ಮುಹಮ್ಮದ್ ರಿಝ್ವಾನ್ (28) ಎಂದು ಗುರುತಿಸಲಾಗಿದೆ.

ಮೊಹಮ್ಮದ್ ರಿಜ್ವಾನ್ ಗೋವಾದಿಂದ ಮುಂಬೈ ಕಡೆಗೆ ಮೀನು ಸಾಗಾಟ ಲಾರಿ ಚಲಾಯಿಸುತ್ತಿದ್ದು, ಬೆಳಿಗ್ಗೆ 10.45 ರ ಸುಮಾರಿಗೆ ಮುಂಬೈ-ಗೋವಾ ಹೆದ್ದಾರಿಯ ರಾಜಾಪುರದಲ್ಲಿ ರಸ್ತೆ ಬದಿಯ ಡಾಭಾದ ಮುಂದೆ ನಿಲ್ಲಿಸಲಾಗಿದ್ದ ಟ್ರಕ್ ಗೆ ಹಿಂಬಂದಿಯಿಂದ ಡಿಕ್ಕಿ ಹೊಡೆದಿದೆ.

ಈ ಡಿಕ್ಕಿಯಲ್ಲಿ, ಮೀನುಸಾಗಾಟ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮೃತರು ತಂದೆ, ತಾಯಿ, ಪತ್ನಿ, ಎರಡು ವರ್ಷದ ಮಗು ‌ಹಾಗೂ ಮೂವರು ಸಹೋದರು, ಮೂವರು ಸಹೋದರಿ ಯರನ್ನು ಅಗಲಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಲ್ಲಿಸಿದ್ದ ಟ್ರಕ್ ಚಾಲಕ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ. ಸ್ಥಳಕ್ಕೆ ರಾಜಾಪುರ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!