February 26, 2026

ನೀಟ್ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವಂತೆ ಒತ್ತಡ ಹೇರಿದ್ದ ತಂದೆ: ತಂದೆಯನ್ನು ಗುಂಡಿಕ್ಕಿ ಕೊಂದ ಪುತ್ರ

0
image_editor_output_image2049192964-1771975749040.jpg

ಲಖನೌ: ನೀಟ್ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವಂತೆ ಪದೇ ಪದೇ ಒತ್ತಡ ಹೇರಿದ ಕಾರಣಕ್ಕೆ ಅಪ್ಪನನ್ನು ಗುಂಡಿಕ್ಕಿ ಕೊಂದು ಬಳಿಕ ಸಹೋದರಿಯ ಎದುರೆ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ಭೀಕರ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ಸಂಭವಿಸಿದೆ.

ಮೃತರನ್ನು ಲಖನೌನಲ್ಲಿ ಮೆಡಿಕಲ್‌ ಸ್ಟೋರ್‌ ಹಾಗೂ ಮದ್ಯ ಮಾರಾಟದ ವ್ಯವಹಾರವನ್ನು ನಡೆಸುತ್ತಿದ್ದ 49 ವರ್ಷದ ಮನ್ವೇಂದ್ರ ಎಂದು ಗುರುತಿಸಲಾಗಿದೆ.

ಇವರು ಮಗನಿಗೆ ನೀಟ್ ಪರೀಕ್ಷೆ ಗೆ ತಯಾರಿ ನಡೆಸುವಂತೆ ಒತ್ತಡ ಹೇರುತ್ತಿದ್ದರು ಎಂದು ಆರೋಪಿಸಲಾಗಿದ್ದು, ಇದೇ ಸಿಟ್ಟಿಗೆ ತಂದೆ-ಮಗನ ನಡುವೆ ಆಗಾಗ ವಾಗ್ವಾದ ನಡೆಯುತ್ತಿತ್ತು. ಕೆಲವೊಮ್ಮೆ ಅಕ್ಷಯ್‌ ಈ ವಿಚಾರವಾಗಿ ಮನೆಬಿಟ್ಟು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಸಂಜೆ 4:30ರ ವೇಳೆಗೆ ತಂದೆ–ಮಗನ ನಡುವೆ ತೀವ್ರ ಜಗಳ ಉಂಟಾಗಿದೆ. ಈ ವೇಳೆ ಅಕ್ಷಯ್‌ ಗುಂಡು ಹಾರಿಸಿ ತನ್ನ ತಂದೆಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಮೃತ ದೇಹವನ್ನು ಮೂರನೇ ಮಹಡಿಯಿಂದ ಕೆಳ ಮಹಡಿಗೆ ಎಳೆದುಕೊಂಡು ಬಂದು, ಅದನ್ನು ತುಂಡಾಗಿ ಕತ್ತರಿಸಲು ಮುಂದಾಗಿದ್ದಾನೆ.

ಇದನ್ನು ನೋಡಿದ ಸಹೋದರಿಗೆ ಹತ್ಯೆಯ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿ, ಆಕೆಯ ಮುಂದೆಯೇ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ.

ಬಳಿಕ ದೇಹದ ಭಾಗಗಳನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿ ಕಸದಂತೆ ವಿಲೇವಾರಿ ಮಾಡಿದ್ದಾನೆ. ದೇಹದ ಕೆಲವು ಭಾಗಗಳನ್ನು ಮನೆಯಲ್ಲಿದ್ದ ನೀಲಿ ಬಣ್ಣದ ಡ್ರಮ್‌ನಲ್ಲಿ ಸಂಗ್ರಹಿಸಿದ್ದನು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಇತ್ತೀಚಿನ ವರದಿಗಳ ಪ್ರಕಾರ ಅಕ್ಷತ್ ಗೆ ತಂದೆಯ ಬ್ಯುಸಿನೆಸ್ ನಡೆಸುವ ಆಸೆ ಇತ್ತು, ಆದರೆ ಅಪ್ಪ ಅದಕ್ಕೆ ಒಪ್ಪಿಲ್ಲ, ಮಗ ಡಾಕ್ಟರ್ ಆಗಬೇಕೆಂದು ಒತ್ತಡ ಹೇರುತ್ತಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!