April 14, 2026

ಸುಳ್ಯ: ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಚಾಲಕ ಮೃತ್ಯು

0
image_editor_output_image2069510426-1771975585790.jpg

ಸುಳ್ಯ: ಬೊಳುಬೈಲಿನಲ್ಲಿ ಫೆ.21ರಂದು ನಡೆದ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡ ಚಾಲಕ ಕುಕ್ಕೆಶ್ರೀ ವಸಂತ್ ರವರು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಫೆ.23ರ ರಾತ್ರಿ ನಿಧನರಾದರು.

ಕುಕ್ಕೆಶ್ರೀ ವಸಂತ್ ಹಾಗೂ ಅವರ ಕುಟುಂಬ ಮಡಂತ್ಯಾರಿಗೆ ಸುಳ್ಯದಿಂದ ಹೊರಟಿದ್ದರು. ಕಾರು ಬೊಳುಬೈಲಿನಲ್ಲಿ ಹೋಗುತ್ತಿರುವಾಗ ಅವರ ಹಿಂಬದಿಯಿಂದ ಅತೀ ವೇಗವಾಗಿ ಬಂದ ಕಾರು ವಸಂತರ ಕಾರಿಗೆ ಢಿಕ್ಕಿಯಾಯಿತು.

ಪರಿಣಾಮ ವಸಂತರು ಗಂಭೀರ ಗಾಯಗೊಂಡು ಅವರ ಪತ್ನಿ, ಮಕ್ಕಳಿಗೂ ಗಾಯಗಳಾಗಿತ್ತು. ಎಲ್ಲರನ್ನೂ ಸುಳ್ಯ ಆಸ್ಪತ್ರೆಗೆ ಕರೆ ತರಲಾಗಿತ್ತು.

ವಸಂತ್ ಗಂಭೀರವಾಗಿ ಗಾಯಗೊಂಡ ಹಿನ್ನಲೆಯಲ್ಲಿ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫೆ.23 ರಂದು ಬೆಳಗ್ಗಿನ ಜಾವ ಸುಳ್ಯ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ರಾತ್ರಿ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!