April 12, 2026

ಮದುವೆಯಲ್ಲಿ ಫೋಟೋ ತೆಗೆಯುವಾಗ ಹೃದಯಾಘಾತ‌: ಫೋಟೋಗ್ರಾಫರ್ ಮೃತ್ಯು

0
image_editor_output_image2071357468-1771975431698.jpg

ಗುಂಡ್ಲುಪೇಟೆ(ಚಾಮರಾಜನಗರ): ಮದುವೆ ಫೋಟೋ ತೆಗೆಯುವಾಗ ಹೃದಯಾಘಾತ‌ ಸಂಭವಿಸಿ ಫೋಟೋಗ್ರಾಫರ್ ಸಾವಿಗೀಡಾದ ಘಟನೆ ಪಟ್ಟಣದ ಜೆ ಎಸ್ ಎಸ್ ಅನುಭವ ಮಂಟಪದಲ್ಲಿ ಮಂಗಳವಾರ (ಫೆ.24) ನಡೆದಿದೆ.

ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಮೂರ್ತಿ (35) ಮೃತ. ಇವರಿಗೆ ಪತ್ನಿ, ಪುತ್ರಿ ಇದ್ದಾರೆ. ಮೂರ್ತಿ ಮಂಗಳವಾರ ಮತ್ತು ಬುಧವಾರ ನಿಗಧಿಯಾಗಿದ್ದ ಬಾಚಹಳ್ಳಿ-ದಾರಿಬೇಗೂರು ಗ್ರಾಮದ ವಧು-ವರನ ವಿವಾಹದ ಧಾರಾ ಮುಹೂರ್ತದ ಫೋಟೋ ತೆಗೆಯುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಸ್ನೇಹಿತರು ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರಿಶೀಲಿಸಿದ ವೈದ್ಯರು ಪರೀಕ್ಷಿಸಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!