March 14, 2025

ಮಹಾಕುಂಭಮೇಳಕ್ಕೆ ಹೋಗುತ್ತಿದ್ದಾಗ ವಾಹನ ಅಪಘಾತ: 6 ಮಂದಿ ಸಾವು

0

ಮಧ್ಯಪ್ರದೇಶ: ಪ್ರಯಾಗ್ ರಾಜ್ ಮಹಾಕುಂಭಮೇಳಕ್ಕೆ ಕರ್ನಾಟಕದಿಂದ ತೆರಳುತ್ತಿರುವ ಪ್ರಯಾಣಿಕರು ಅಪಘಾತಕೀಡಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು, ಕೆಲವು ದಿನಗಳ ಹಿಂದೆ ನಡೆದ ಅಪಘಾತದಲ್ಲಿ 5 ಮಂದಿ ಸಾವನಪ್ಪಿದ ಬೆನ್ನಲ್ಲೇ ಇದೀಗ ಮತ್ತೊಂದು ಅಪಘಾತದಲ್ಲಿ ಹೋಗಿದ್ದ 6 ಜನರು, ಮಧ್ಯಪ್ರದೇಶದ ಜಬಲಪುರ್ ಬಳಿ ಸೋಮವಾರ ನಸುಕಿನ ಜಾವ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಮೃತರನ್ನು ಬಾಲಚಂದ್ರ ಗೌಡರ(50), ಸುನೀಲ ಶೇಡಶ್ಯಾಳೆ (45), ಬಸವರಾಜ ಕುರ್ತಿ(63), ಬಸವರಾಜ ದೊಡಮಾಳ(49), ಈರಣ್ಣ ಶೇಬಿನಕಟ್ಟಿ (27), ವಿರೂಪಾಕ್ಷ ಗುಮತಿ (61) ಮೃತರು.

ತೂಫಾನ್‌ ವಾಹನದಲ್ಲಿ ಇವರೆಲ್ಲರೂ ಪ್ರಯಾಗರಾಜ್‌ಗೆ ತೆರಳಿದ್ದರು. ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಡಿವೈಡರ್ ದಾಟಿ ಮತ್ತೊಂದು ದಿಕ್ಕಿನಲ್ಲಿ ಬರುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದಿದೆ.

 

 

Leave a Reply

Your email address will not be published. Required fields are marked *

error: Content is protected !!