ಮಂಗಳೂರು: ರಾತ್ರಿ 12 ಗಂಟೆ ತನಕ ಅಂಗಡಿ ತೆರೆದಿಡಲು ಅನುಮತಿ ನೀಡಿದ ಪೊಲೀಸ್ ಕಮಿಷನರ್
ಮಂಗಳೂರು: ರಂಜಾನ್ ಹಬ್ಬದ ಹಿನ್ನೆಲೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇಂದು ಮಧ್ಯರಾತ್ರಿ 12 ಗಂಟೆ ತನಕ ಅಂಗಡಿ ತೆರೆದಿಡಲು ಅನುಮತಿ ನೀಡಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ಇಂದು ಮಧ್ಯರಾತ್ರಿ 12 ಗಂಟೆ ತನಕ ಅಂಗಡಿ ತೆರೆದಿಡಲು ಅನುಮತಿ ನೀಡುವಂತೆ ತುಂಬಾ ಕಡೆಯಿಂದ ಆಗ್ರಹಗಳು ಬಂದ ಹಿನ್ನೆಲೆಯಲ್ಲಿ ನಾನು ಈ ನಿರ್ಧಾರಕ್ಕೆ ಒಪ್ಪಿದ್ದೇನೆ ಎಂದು ಹೇಳಿದ್ದಾರೆ.




