ಮಂಗಳೂರು: ನಡೆದುಕೊಂಡು ಹೋಗುತ್ತಿದ್ದಾಗ ಕಾರು ಢಿಕ್ಕಿ: ಶಾಸಕನ ಸಹೋದರಿಯ ಪುತ್ರ ಸ್ಥಳದಲ್ಲಿಯೇ ಸಾವು

ಮಂಗಳೂರು: ಊಟ ಮುಗಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸಿಂದನೂರು ಶಾಸಕ ಹಂಪನಗೌಡ ಬಾದರ್ಲಿ ಅವರ ಸಹೋದರಿಯ ಪುತ್ರ ದೀಪುಗೌಡ (50) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ರಾಯಚೂರು ಜಿಲ್ಲೆಯ ಸಿಂದನೂರಿನವರಾದ ದೀಪು ಗೌಡ ಅಲಿಯಾಸ್ ಪೊಂಪನ ಗೌಡ (48) ಮೃತರು. ದೀಪು ಗೌಡ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರ ಸಹೋದರಿಯ ಪುತ್ರ. ಘಟನೆಯಲ್ಲಿ ಪ್ರದೀಪ್ ಮತ್ತು ನಾಗರಾಜ್ ಅವರು ಗಾಯಗೊಂಡಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.