ಮನೆಯಲ್ಲಿದ್ದ ಚಿನ್ನ, ಬೆಳ್ಳಿ, ನಗದನ್ನು ದೋಚಿ ಮನೆಯ ಮಾಲಕನ ಕಾರಿನಲ್ಲೇ ಪರಾರಿಯಾದ ಕಳ್ಳರು
ಹಾಸನ: ಮನೆಯ ಬಾಗಿಲು ಮುರಿದು ಚಿನ್ನ, ಬೆಳ್ಳಿ, ನಗದನ್ನು ದೋಚಿ ಮನೆಯ ಮಾಲೀಕನ ಕಾರಿನಲ್ಲೇ ತುಂಬಿಕೊಂಡು ಕಳ್ಳರು ಪರಾರಿಯಾದ ಘಟನೆ ಹಾಸನದ ವಿದ್ಯಾನಗರದಲ್ಲಿ ನಡೆದಿದೆ.
ನಗರದ ವನಜಾಕ್ಷಿ ಎಂಬುವವರು ಕಳೆದ ಹತ್ತು ದಿನಗಳ ಹಿಂದೆ ಮನೆ, ಗೇಟ್‍ಗಳಿಗೆ ಬೀಗ ಹಾಕಿಕೊಂಡು ಬೆಂಗಳೂರಿನಲ್ಲಿರುವ ಮಗನ ಮನೆ ತೆರಳಿದ್ದರು. ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿರುವ ಕಳ್ಳರು ಗೇಟ್ ಬೀಗ ಒಡೆದು, ಮನೆಯ ಬಾಗಿಲಿನ ಲಾಕ್ ಮುರಿದು ಒಳಗೆ ನುಗ್ಗಿದ್ದಾರೆ.
ಮನೆಯ ರೂಂನಲ್ಲಿದ್ದ ಬೀರುವಿನ ಲಾಕ್ ಒಡೆದು ಅದರಲ್ಲಿಟ್ಟಿದ್ದ ಚಿನ್ನ, ಬೆಳ್ಳಿ, ನಗದನ್ನು ಕದ್ದಿದ್ದಾರೆ. ಬಳಿಕ ಮನೆಯಲ್ಲಿದ್ದ ಕಾರಿನ ಕೀ ತೆಗೆದುಕೊಂಡು ಇನ್ನೊಂದು ಗೇಟ್‍ನ ಬೀಗ ಒಡೆದು ಕಾರನ್ನು ಕದ್ದೊಯ್ದಿದ್ದಾರೆ.





